ಶ್ರದ್ಧಾ ವಾಲ್ಕರ್ ಪ್ರಕರಣ ನೋಡಿ ಬ್ರೇಕ್ ಅಪ್ ಮಾಡಿಕೊಂಡೆ ನಟಿ ತುನಿಷಾ ಶರ್ಮಾ ಗೆಳೆಯನ ಪ್ರತಿಪಾದನೆ
Update: 2022-12-26 22:55 IST
ಮುಂಬೈ, ಡಿ. 26: ಶ್ರದ್ಧಾ ವಾಲ್ಕರ್(shraddha walker) ಹತ್ಯೆ ಪ್ರಕರಣ ತಾನು ಕಿರುತೆರೆ ನಟಿ ತುನಿಷಾ(Tunisha) ಅವರೊಂದಿಗಿನ ಸಂಬಂಧವನ್ನು ಅಂತ್ಯಗೊಳಿಸಲು ಕಾರಣವಾಗಿತ್ತು ಎಂದು ತುನಿಷಾ ಆತ್ಮಹತ್ಯೆ ಪ್ರಕರಣದ ಆರೋಪಿ ಶೀಝನ್ ಖಾನ್(Sheezhan Khan) ಹೇಳಿದ್ದಾನೆ.
ಶ್ರದ್ಧಾ ವಾಲ್ಕರ್ ಪ್ರಕರಣ ನೋಡಿದ ಬಳಿಕ ತುನಿಷಾ ಶರ್ಮಾರೊಂದಿಗಿನ ಸಂಬಂಧವನ್ನು ಅಂತ್ಯಗೊಳಿಸಿದೆ ಎಂದು ಪೊಲೀಸ್ ಕಸ್ಟಡಿಯಲ್ಲಿ ಇರುವ ಶೀಝನ್ ಖಾನ್ ತಿಳಿಸಿದ್ದಾನೆ. ನಾವು ಭಿನ್ನ ಧರ್ಮಕ್ಕೆ ಸೇರಿದವರು ಹಾಗೂ ನಮ್ಮ ನಡುವೆ ಹೆಚ್ಚು ವಯಸ್ಸಿನ ಅಂತರ ಇದೆ ಎಂದು ನಾನು ತುನಿಷಾ ಶರ್ಮಾಗೆ ತಿಳಿಸಿದ್ದೆ ಎಂದು 28ರ ಹರೆಯದ ಶೀಝನ್ ತಿಳಿಸಿದ್ದಾನೆ.
ತುನಿಷಾ ಶರ್ಮಾ ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಪೊಲೀಸರಿಗೆ ಸುಸೈಡ್ ನೋಟ್ ಸಿಕ್ಕಿಲ್ಲ.