×
Ad

ಉ.ಪ್ರ.: ಜೈಲು ವಾರ್ಡನ್‌ಗೆ ಸಹೋದ್ಯೋಗಿಗಳಿಂದಲೇ ಅಮಾನುಷ ಥಳಿತ, ವೀಡಿಯೊ ವೈರಲ್

Update: 2022-12-28 10:21 IST

ರಾಯ್ ಬರೇಲಿ: ಕ್ಯಾಂಟೀನ್ ಆಹಾರದ  ವಿಚಾರಕ್ಕೆ ಸಂಬಂಧಿಸಿ  ಉತ್ತರ ಪ್ರದೇಶದ ಜೈಲು ವಾರ್ಡನ್‌ಗೆ ಆತನ ಸಹೋದ್ಯೋಗಿಗಳೇ  ಅಮಾನುಷವಾಗಿ ಥಳಿಸಿರುವ ಘಟನೆ ವರದಿಯಾಗಿದೆ.

ಇವರೆಲ್ಲರೂ  ಉತ್ತರ ಪ್ರದೇಶದ ರಾಯ್ ರೇಲಿಯ ಜಿಲ್ಲಾ ಕಾರಾಗೃಹದಲ್ಲಿ ಕರ್ತವ್ಯದಲ್ಲಿದ್ದರು.

ಈ ಘಟನೆ ಜೈಲಿನ ಹೊರಗೆ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ತಮ್ಮ ಕ್ಯಾಂಟೀನ್ ವ್ಯವಹಾರದ ಮೇಲೆ ಪರಿಣಾಮ ಬೀರುತ್ತಿರುವುದರಿಂದ ಮೆಸ್‌ನಲ್ಲಿನ ಆಹಾರದ ಗುಣಮಟ್ಟವನ್ನು ಕುಗ್ಗಿಸುವಂತೆ ಒತ್ತಡ ಹೇರಿದ ನಂತರ ತನ್ನ ಹಾಗೂ ತನ್ನ ಸಹೋದ್ಯೋಗಿಗಳ ನಡುವೆ ವಾಗ್ವಾದ ನಡೆಯಿತು ಎಂದು ಜೈಲಿನ ಮೆಸ್ ನ ಉಸ್ತುವಾರಿ ಮುಖೇಶ್ ದುಬೆ ಆರೋಪಿಸಿದ್ದಾರೆ.

ಜೈಲಿನ ಮೆಸ್ ನ ಉಸ್ತುವಾರಿ ಮುಖೇಶ್ ದುಬೆ ಅವರನ್ನು ಅವರ ಮೂವರು ಸಹೋದ್ಯೋಗಿಗಳು ಕೋಲುಗಳಿಂದ ಥಳಿಸುತ್ತಿರುವುದು, ಆದರೆ ಇಬ್ಬರು  ಇದನ್ನು ನೋಡುತ್ತಿರುವುದು  ವೀಡಿಯೊದಲ್ಲಿ ಕಂಡುಬಂದಿದೆ

ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಕೂಡಲೇ ಟ್ವಿಟರ್ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ರಾಯ್ ಬರೇಲಿ ಪೊಲೀಸರು, ಐವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಹಾಗೂ  ಇಲಾಖಾ ತನಿಖೆಗೆ ಆದೇಶಿಸಲಾಗಿದೆ ಎಂದು ಹೇಳಿದ್ದಾರೆ.

Similar News