×
Ad

ದಕ್ಷಿಣ ಆಫ್ರಿಕಾದ ಬೌಲರ್ ಗೆ ಢಿಕ್ಕಿ ಹೊಡೆದ ಕ್ಯಾಮರಾ: ಸ್ಪೈಡರ್ ಕ್ಯಾಮ್ ಆಪರೇಟರ್ ಗೆ ಗೇಟ್ ಪಾಸ್

Update: 2022-12-28 12:41 IST

ಮೆಲ್ಬೋರ್ನ್: ಆಸ್ಟ್ರೇಲಿಯಾ ಹಾಗೂ  ದಕ್ಷಿಣ ಆಫ್ರಿಕಾ ನಡುವಿನ ಎಂಸಿಜಿಯಲ್ಲಿ ನಡೆಯುತ್ತಿರುವ ದ್ವಿತೀಯ  ಟೆಸ್ಟ್‌ ನಿಂದ ಸ್ಪೈಡರ್ ಕ್ಯಾಮ್  ಆಪರೇಟರ್ ಗೆ ಗೇಟ್ ಪಾಸ್ ನೀಡಲಾಗಿದೆ. ಸ್ಪೈಡರ್ ಕ್ಯಾಮ್ ಆಪರೇಟರ್ ಎಂಸಿಜಿ ಟೆಸ್ಟ್ ನ 2ನೇ ದಿನದಾಟದಲ್ಲಿ ಕಾರ್ಯನಿರ್ವಹಿಸಿದ್ದರು.

ವೇಗವಾಗಿ ಚಲಿಸುವ ಸ್ಪೈಡರ್  ಕ್ಯಾಮರಾವು ಟೆಸ್ಟ್ ನ 2ನೇ ದಿನದಾಟದಲ್ಲಿ  ಫೀಲ್ಡಿಂಗ್ ನಿರತರಾಗಿದ್ದ ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಅನ್ರಿಚ್ ನಾರ್ಟ್ಜೆ ಅವರಿಗೆ ಹಿಂದಿನಿಂದ ಢಿಕ್ಕಿ ಹೊಡೆದು ಕೆಳಗೆ ಬೀಳಿಸಿದೆ. 

ಈ ಘಟನೆಯ  ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಅಧಿಕೃತ ಪ್ರಸಾರಕರು ನಾರ್ಟ್ಜೆ ಹಾಗೂ ದಕ್ಷಿಣ ಆಫ್ರಿಕಾ ತಂಡದ ಕ್ಷಮೆಯಾಚಿಸಿದ್ದಾರೆ.

ಕ್ಯಾಮರಾವು ನನ್ನ ಬಲ ಭುಜ ಹಾಗೂ ಮೊಣಕೈಗೆ ಢಿಕ್ಕಿ ಹೊಡೆದಿದ್ದರೂ ನಾನೀಗ ಚೆನ್ನಾಗಿದ್ದೇನೆ ಎಂದು ನಾರ್ಟ್ಜೆ  ಖಚಿತಪಡಿಸಿದ್ದಾರೆ.

ಇದು ಅಪರೇಟರ್ ನಿಂದ ಆಗಿರುವ ಪ್ರಮಾದವಾಗಿದ್ದು, ಈ ತಪ್ಪಿಗೆ ಕ್ಷಮೆಯಾಚಿಸುತ್ತೇನೆ ಎಂದು ಅಧಿಕೃತ ಪ್ರಸಾರಕ ಫಾಕ್ಸ್ ಸ್ಪೋಟ್ಸ್ ತಿಳಿಸಿದೆ.

Similar News