×
Ad

ದಿಲ್ಲಿಯ ಚಳಿ ಎದುರಿಸಲು ಉಣ್ಣೆಯ ಟೋಪಿ ಧರಿಸಿದ ತಮಿಳುನಾಡು ರಣಜಿ ಕ್ರಿಕೆಟ್ ತಂಡದ ಆಟಗಾರರು

Update: 2022-12-28 15:03 IST

ಹೊಸದಿಲ್ಲಿ: ಇಲ್ಲಿನ ಕೋಟ್ಲಾ ಮೈದಾನದಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಪಂದ್ಯದ ಮೊದಲ ದಿನದಂದು ಪ್ರವಾಸಿ ತಮಿಳುನಾಡು ತಂಡಕ್ಕೆ ದಿಲ್ಲಿಯ  ಹಿಮದ ವಾತಾವರಣ ಸದಾ ಕಾಡುತ್ತಿತ್ತು. ಆದಾಗ್ಯೂ, ಆರಂಭಿಕ ವೇಗದ ಬೌಲರ್ ಎಲ್. ವಿಘ್ನೇಶ್ ಅವರು ತಲೆಗೆ ಉಣ್ಣೆಯ ಟೋಪಿಗಳನ್ನು ಧರಿಸಲು ಸಲಹೆ ನೀಡಿದರು. ಉಣ್ಣೆಯ ಟೋಪಿ ಧರಿಸಿ ಚಳಿಯನ್ನು ಎದುರಿಸಿದ ತಮಿಳುನಾಡು ಮೊದಲ ದಿನದಾಟದಲ್ಲಿ ಉತ್ತಮ ಪ್ರದರ್ಶನ ನೀಡಿತು.

ವಿಘ್ನೇಶ್  ಹಾಗೂ  ಅವರ ಹೊಸ ಚೆಂಡಿನ ಜೊತೆಗಾರ ಸಂದೀಪ್ ವಾರಿಯರ್ ತಲಾ ಮೂರು ವಿಕೆಟ್ ಗಳನ್ನು ಪಡೆದು ಆತಿಥೇಯ ದಿಲ್ಲಿ ತಂಡವನ್ನು  ವಿಕೆಟ್ ನಷ್ಟಕ್ಕೆ 212 ರನ್ ಗೆ ನಿರ್ಬಂಧಿಸಿದರು.

“ನಾವು ಮೂರು ದಿನದಿಂದ ಇಲ್ಲಿದ್ದೇವೆ, ಶೀತದ ವಾತಾವರಣಕ್ಕೆ ಒಗ್ಗಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಕಿವಿ ಮುಚ್ಚಿಕೊಂಡು ಉಣ್ಣೆಯ ಕ್ಯಾಪ್ ಹಾಕಿಕೊಳ್ಳಬೇಕು ಎಂದು ವಿಘ್ನೇಶ್ ಎಲ್ಲರಿಗೂ ಹೇಳಿದ್ದಾರೆ.”ಎಂದು ಕಿವಿಯಲ್ಲಿ ಹತ್ತಿ ಪ್ಲಗ್‌ಗಳನ್ನು ಇಟ್ಟುಕೊಂಡು ಬೌಲ್ ಮಾಡಿದ ವಾರಿಯರ್ ಹೇಳಿದ್ದಾರೆ.

Similar News