ನಿವೃತ್ತಿಗೆ ಸದಾ ಸಿದ್ಧ ಎಂದ ಆಸ್ಟ್ರೇಲಿಯದ ಸ್ಟಾರ್ ಆರಂಭಿಕ ಆಟಗಾರ ಡೇವಿಡ್ ವಾರ್ನರ್

Update: 2022-12-29 09:55 GMT

ಮೆಲ್ಬೋರ್ನ್: ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ 50 ಓವರ್‌ಗಳ ವಿಶ್ವಕಪ್‌ನಲ್ಲಿ ಆಡಲು ತಾನು ಬದ್ಧನಾಗಿದ್ದೇನೆ.  ಆದರೆ ನಿವೃತ್ತಿಯಾಗುವ ಸಮಯ ಆಗಿದೆ ಎಂದು ಟೀಮ್ ಮ್ಯಾನೇಜ್ ಮೆಂಟ್  ಹೇಳಿದರೆ ಕ್ರಿಕೆಟ್  ತ್ಯಜಿಸುವುದಾಗಿ ಆಸ್ಟ್ರೇಲಿಯಾದ ಸ್ಟಾರ್ ಆರಂಭಿಕ ಆಟಗಾರ ಡೇವಿಡ್ ವಾರ್ನರ್ Australia opener David Warner ಗುರುವಾರ ಹೇಳಿದ್ದಾರೆ.

ಟೆಸ್ಟ್  ಕ್ರಿಕೆಟ್‌ನಲ್ಲಿ ದೀರ್ಘಕಾಲದಿಂದ ರನ್ ಬರ ಎದುರಿಸುತ್ತಿದ್ದ 36 ವರ್ಷ ವಯಸ್ಸಿನ ವಾರ್ನರ್  ತನ್ನ 100 ನೇ ಟೆಸ್ಟ್‌ನಲ್ಲಿ ದ್ವಿಶತಕ ಗಳಿಸುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದರು.

ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ತಮ್ಮ  ಅಂತಿಮ ಬಾಕ್ಸಿಂಗ್ ಡೇ ಟೆಸ್ಟ್ ಆಗಲಿದೆಯೇ ಎಂಬ ಪ್ರಶ್ನೆಗೆ, "ಮುಂದಿನ ವರ್ಷದ ಏಕದಿನ ವಿಶ್ವಕಪ್‌ನಲ್ಲಿ ಆಡಲು ನಾನು ಬದ್ಧನಾಗಿದ್ದೇನೆ. ನಾನು ಫಿಟ್ ಆಗಿರಲು ಬಯಸುತ್ತೇನೆ, ಸ್ಕೋರ್ ಗಳಿಸಲು ಪ್ರಯತ್ನಿಸುತ್ತೇನೆ, ಆದರೆ ಅವರು (ತಂಡದ ಮ್ಯಾನೇಜ್‌ಮೆಂಟ್) ನನ್ನ ಬೆನ್ನನ್ನು ತಟ್ಟಿ ಇದು ನಿವೃತ್ತಿಯ ಸಮಯ ಎಂದು ಹೇಳಿದರೆ, ನಾನು (ನಿರ್ಗಮಿಸಲು) ಸಿದ್ಧ" ಎಂದು ವಾರ್ನರ್ ಹೇಳಿದರು.

ಆಸ್ಟ್ರೇಲಿಯ ತಂಡ 2ನೇ ಟೆಸ್ಟ್ ಪಂದ್ಯವನ್ನು ಇನಿಂಗ್ಸ್ ಹಾಗೂ  182 ರನ್‌ಗಳಿಂದ ಗೆದ್ದುಕೊಂಡಿದೆ. 

"ಪಂದ್ಯಶ್ರೇಷ್ಠ'' ಪ್ರಶಸ್ತಿಗೆ  ಆಯ್ಕೆಯಾದ ವಾರ್ನರ್ ಮಂಗಳವಾರ ಟೆಸ್ಟ್ ಕ್ರಿಕೆಟ್‌ನ ಇತಿಹಾಸದಲ್ಲಿ ತನ್ನ 100 ನೇ ಪಂದ್ಯದಲ್ಲಿ ಶತಕ ಬಾರಿಸಿದ 10 ನೇ ಬ್ಯಾಟರ್ ಹಾಗೂ ದ್ವಿಶತಕ ಗಳಿಸಿದ ಎರಡನೇ ಆಟಗಾರ ನೆಂಬ ಹಿರಿಮೆ ಪಾತ್ರರಾದರು.

Similar News