×
Ad

ಸೀಟ್‌ ಬೆಲ್ಟ್‌ ಧರಿಸದೇ ಇದ್ದುದರಿಂದ 2021ರಲ್ಲಿ ಅಪಘಾತಗಳಲ್ಲಿ 16,397 ಮಂದಿ ಬಲಿ: ಕೇಂದ್ರ ಸಾರಿಗೆ ಸಚಿವಾಲಯದ ವರದಿ

Update: 2022-12-29 15:27 IST

ಹೊಸದಿಲ್ಲಿ: ಸೀಟ್‌ ಬೆಲ್ಟ್‌ ಧರಿಸದೇ ಇದ್ದುದರಿಂದ 2021 ರಲ್ಲಿ ನಡೆದ ರಸ್ತೆ ಅಪಘಾತಗಳಲ್ಲಿ (road accidents) ಒಟ್ಟು 16,397 ಮಂದಿ  ಬಲಿಯಾಗಿದ್ದಾರೆ. ಈ 16,397 ಮಂದಿಯಲ್ಲಿ 8,438 ಮಂದಿ ಚಾಲಕರಾಗಿದ್ದರೆ ಉಳಿದ 7,959 ಮಂದಿ ಪ್ರಯಾಣಿಕರಾಗಿದ್ದರು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ವರದಿ ತಿಳಿಸಿದೆ.

2021 ರಲ್ಲಿ  ಹೆಲ್ಮೆಟ್‌ ಧರಿಸದೇ ಇದ್ದ ಕಾರಣ 46,593 ಮಂದಿ ಬಲಿಯಾಗಿದ್ದರೆ ಇವರ ಪೈಕಿ  32,877 ಮಂದಿ ಚಾಲಕರಾಗಿದ್ದರೆ ಉಳಿದ 13,716 ಮಂದಿ ಹಿಂಬದಿ ಪ್ರಯಾಣಿಕರಾಗಿದ್ದರು ಎಂದು ʻಭಾರತದಲ್ಲಿ ರಸ್ತೆ ಅಪಘಾತಗಳು—2021" ಎಂಬ ಈ ವರದಿ ತಿಳಿಸಿದೆ.

2021 ರಲ್ಲಿ ಒಟ್ಟು 4,12,432 ರಸ್ತೆ ಅಪಘಾತಗಳು ಸಂಭವಿಸಿವೆ ಹಾಗೂ ಈ ಅಪಘಾತಗಳಲ್ಲಿ 1,53,972 ಮಂದಿ ಬಲಿಯಾಗಿದ್ದರೆ 3,84,448 ಮಂದಿ ಗಾಯಗೊಂಡಿದ್ದರು ಎಂದು ವರದಿ ಹೇಳಿದೆ.

ಹೆಲ್ಮೆಟ್‌ ಧರಿಸದೇ ಇದ್ದುದರಿಂಧ 2021ರಲ್ಲಿ ಅಪಘಾತ ನಡೆದ ವೇಳೆ 93,763 ಮಂದಿ ಗಾಯಗೊಂಡಿದ್ದರೆ, ಸೀಟ್‌ ಬೆಲ್ಟ್‌ ಧರಿಸದೇ ಇದ್ದುದರಿಂದ ಅಪಘಾತಗಳಲ್ಲಿ 39,231 ಮಂದಿ ಗಾಯಗೊಂಡಿದ್ದರು ಎಂದು ವರದಿ ತಿಳಿಸಿದೆ.

Similar News