×
Ad

ಕೊಚ್ಚಿ ಕಾರ್ನಿವಲ್‌ ನಲ್ಲಿ ನಿಲ್ಲಿಸಿರುವ ಬೃಹತ್‌ ಪ್ರತಿಕೃತಿ ಪ್ರಧಾನಿ ಮೋದಿಯನ್ನು ಹೋಲುತ್ತದೆಂದು ಬಿಜೆಪಿ ಪ್ರತಿಭಟನೆ

Update: 2022-12-29 17:16 IST

ಕೊಚ್ಚಿ: ಕೇರಳದ ಕೊಚ್ಚಿಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಹೊಸವರ್ಷವನ್ನು ಸಂಭ್ರಮದಿಂದ ಸ್ವಾಗತಿಸಲು ಸಿದ್ಧತೆಗಳು ನಡೆದಿವೆ. ಕೊಚ್ಚಿ ಕಾರ್ನಿವಲ್‌ಗೆ ಸಿದ್ಧತೆಯ ಭಾಗವಾಗಿ ತಲೆಯೆತ್ತಿರುವ ಬೃಹತ್‌ ಪ್ರತಿಕೃತಿ ಈ ಬಾರಿ ವಿವಾದಕ್ಕೀಡಾಗಿದೆ. ಈ ಪ್ರತಿಕೃತಿಯು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೋಲುತ್ತಿದೆ ಎಂದು ಹೇಳಿ ಬಿಜೆಪಿ ತನ್ನ ಆಕ್ಷೇಪ ವ್ಯಕ್ತಪಡಿಸಿದೆ ಎಂದು ವರದಿಯಾಗಿದೆ.

ಹೊಸ ವರ್ಷದ ಆಚರಣೆ ಭಾಗವಾಗಿ ಹೊಸ ವರ್ಷ ಆಗಮನದ ಮುನ್ನ ಈ ಪ್ರತಿಕೃತಿಯನ್ನು ಸುಡಲಾಗುತ್ತದೆ.

ಆದರೆ ಈ ಬಾರಿ ಬಿಜೆಪಿಯ ವ್ಯಾಪಕ ವಿರೋಧದ ಹಿನ್ನೆಲೆಯಲ್ಲಿ ಪ್ರತಿಕೃತಿ ಸಂಬಂಧಿತ ಕೆಲಸ ಸ್ಥಗಿತಗೊಂಡಿತ್ತು. ನಂತರ ಪ್ರತಿಭಟನಾಕಾರರ ಜೊತೆ ಮಾತುಕತೆ ನಡೆಸಿ ಆಯೋಜಕರು ಪ್ರತಿಕೃತಿ ಮುಖದಲ್ಲಿ ಬದಲಾವಣೆ ಮಾಡಲು ಒಪ್ಪಿದ ನಂತರ ಬಿಜೆಪಿ ತನ್ನ ಪ್ರತಿಭಟನೆ ವಾಪಸ್‌ ಪಡೆದುಕೊಂಡಿದೆ ಎಂದು ತಿಳಿದು ಬಂದಿದೆ.

Similar News