ಮಧ್ಯಪ್ರದೇಶ: ಅಕ್ಷರ ತಪ್ಪಿಗೆ 5 ವರ್ಷದ ಬಾಲಕಿಯ ಕೈ ಮುರಿದ ಶಿಕ್ಷಕ

Update: 2022-12-29 17:42 GMT

ಭೋಪಾಲ, ಡಿ. 29: ಬೋಪಾಲದ ಖಾಸಗಿ ಟ್ಯೂಸನ್ ಕ್ಲಾಸ್ ನ ಶಿಕ್ಷಕರೋರ್ವರು ‘ಪ್ಯಾರೋಟ್’ (Parrot)ಶಬ್ದದ ಅಕ್ಷರಗಳನ್ನು ಸರಿಯಾಗಿ ಹೇಳದ ಐದು ವರ್ಷದ ಬಾಲಕಿಯ ಕೈ ತಿರುಚಿ ಮುರಿದಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಈ ಘಟನೆ ಮಂಗಳವಾರ ನಡೆದಿದ್ದು, 22 ವರ್ಷದ ಆರೋಪಿ ಶಿಕ್ಷಕನನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಬಾಲಕಿ ‘ಪ್ಯಾರೋಟ್’ ಪದದ ಅಕ್ಷರಗಳನ್ನು ಹೇಳಲು ಸಾಧ್ಯವಾಗದೇ ಇದ್ದಾಗ ಆರೋಪಿ ಶಿಕ್ಷಕ ಪ್ರಯಾಗ್ ವಿಶ್ವಕರ್ಮ ಆಕೆಯ ಕೆನ್ನೆಗೆ ಬಾರಿಸಿದ್ದಾನೆ ಹಾಗೂ ಕೈ ತಿರುಚಿ ಮುರಿದಿದ್ದಾನೆ ಎಂದು ಹಬೀಬ್ ಗಂಜ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಮನೀಶ್ ರಾಜ್ ಸಿಂಗ್ ಭದೌರಿಯಾ ಅವರು ತಿಳಿಸಿದ್ದಾರೆ. ಶಿಕ್ಷಕ ತಿರುಚಿದ ಪರಿಣಾಮ ಬಾಲಕಿಯ ಬಲಗೈ ಮುರಿದಿದೆ ಎಂದು ಸರಕಾರೇತರ ಸಂಸ್ಥೆ ಚೈಲ್ಡ್ ಲೈನ್‌ ನ ನಿರ್ದೇಶಕಿ ಅರ್ಚನಾ ಸಹಾಯಿ ಅವರು ತಿಳಿಸಿದ್ದಾರೆ.

ಘಟನೆಯ ಬಳಿಕ ಬಾಲಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆಕೆಯನ್ನು ಗುರುವಾರ ಬಿಡುಗಡೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ. ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆ ಹಾಗೂ ಬಾಲ ನ್ಯಾಯ (ಮಕ್ಕಳ ಪಾಲನೆ ಹಾಗೂ ರಕ್ಷಣೆ) ಕಾಯ್ದೆಯ ಸಂಬಂಧಿತ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಭದೌರಿಯಾ ತಿಳಿಸಿದ್ದಾರೆ.

ಇದನ್ನೂ ಓದಿ: ಹೇಳುವುದೇ ಬೇರೆ, ಮಾಡುವುದೇ ಬೇರೆ: ಪ್ರಜ್ಞಾ ಸಿಂಗ್ ಠಾಕೂರ್, ಸಿಟಿ ರವಿ ವಿಡಿಯೋ ಹಂಚಿದ ಕಾಂಗ್ರೆಸ್

Similar News