×
Ad

ಪ್ರಧಾನಿ ಮೋದಿ ತಾಯಿಯ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ ರಾಹುಲ್ ಗಾಂಧಿ

Update: 2022-12-30 10:43 IST

ಹೊಸದಿಲ್ಲಿ: ಇಂದು ಮುಂಜಾನೆ ತಮ್ಮ ತಾಯಿ ಹೀರಾಬೆನ್ ಅವರನ್ನು ಕಳೆದುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟರ್ ಮೂಲಕ ಸಾಂತ್ವಾನ  ಹೇಳಿದ್ದಾರೆ.

"ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾ ಬಾ ಅವರ ಸಾವಿನ ಸುದ್ದಿ ಅತ್ಯಂತ ದುಃಖಕರವಾಗಿದೆ. ಈ ಕಷ್ಟದ ಸಮಯದಲ್ಲಿ ನಾನು ಅವರಿಗೆ ಹಾಗೂ  ಅವರ ಕುಟುಂಬಕ್ಕೆ ನನ್ನ ಆಳವಾದ ಸಂತಾಪ ಹಾಗೂ  ಪ್ರೀತಿಯನ್ನು ವ್ಯಕ್ತಪಡಿಸುತ್ತೇನೆ" ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ರಾಹುಲ್ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಪ್ರಧಾನಿಯವರ ತಾಯಿಯ ನಿಧನಕ್ಕೆ ದುಃಖವನ್ನು ವ್ಯಕ್ತಪಡಿಸಿದ್ದಾರೆ.

ಅಹಮದಾಬಾದ್‌ನ ಆಸ್ಪತ್ರೆಗೆ ದಾಖಲಾಗಿದ್ದ ಹೀರಾಬೆನ್‌ ಶುಕ್ರವಾರ ತನ್ನ 99ನೇ ವಯಸ್ಸಿನಲ್ಲಿ ನಿಧರನಾದರು. ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲು ಪ್ರಧಾನಿ ಮೋದಿ ಗಾಂಧಿನಗರಕ್ಕೆ ಆಗಮಿಸಿದ್ದಾರೆ.

Similar News