×
Ad

ರಿಷಭ್ ಪಂತ್‌ ಕಾರು ಅಪಘಾತ ದೃಶ್ಯ ಸಿಸಿಟಿವಿಯಲ್ಲಿ ಸೆರೆ

Update: 2022-12-30 16:32 IST

ಹೊಸದಿಲ್ಲಿ: ಕ್ರಿಕೆಟಿಗ ರಿಷಭ್ ಪಂತ್‌ ಅವರ ಕಾರು ಡಿವೈಡರ್‌ಗೆ ಢಿಕ್ಕಿ ಹೊಡೆದು ನಂತರ ಅದಕ್ಕೆ ಬೆಂಕಿ ಹತ್ತಿಕೊಂಡ ಭಯಾನಕ ಕ್ಷಣವು ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ. ರಿಷಭ್ ಅವರ ಮರ್ಸಿಡಿಸ್‌ ಕಾರು ಅತಿ ವೇಗದಲ್ಲಿ ಸಾಗುತ್ತಿದ್ದಂತೆಯೇ ಉತ್ತರಾಖಂಡದ ರೂರ್ಕಿ ಸಮೀಪ ಡಿವೈಡರ್‌ಗೆ ಢಿಕ್ಕಿ ಹೊಡೆದಿದೆ. ಕಾರಿನೊಳಗಿದ್ದ ಪಂತ್‌ ಕಿಟಿಕಿ ಗಾಜುಗಳನ್ನು ಒಡೆದು ಹೊರಬಂದು ತಮ್ಮನ್ನು ತಾವೇ ಕಾಪಾಡಿಕೊಳ್ಳಬೇಕಾಯಿತು.

ಅಪಘಾತದಲ್ಲಿ  ರಿಷಬ್‌ ಅವರ ಹಣೆ, ಮೊಣಕಾಲು, ಕೈ, ಬೆನ್ನಿಗೆ ಗಾಯಗಳಾಗಿವೆ. ಅವರ ಪರಿಸ್ಥಿತಿ ಗಂಭಿರವಾಗಿಲ್ಲ ಎಂದು ವೈದ್ಯರು ಹೇಳಿದ್ದು ಪ್ರಸಕ್ತ ಅವರನ್ನು ಡೆಹ್ರಾಡೂನ್‌ನ ಮ್ಯಾಕ್ಸ್‌ ಆಸ್ಪತ್ರೆಗೆ ಸೇರಿಸಲಾಗಿದೆ.

ದಿಲ್ಲಿಯಿಂದ ರೂರ್ಕಿಯಲ್ಲಿರುವ ತಮ್ಮ ಮನೆಗೆ ಪಂತ್‌ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಅಮ್ಮನಿಗೆ ಸರ್‌ಪ್ರೈಸ್‌ ನೀಡಲೆಂದು ಹಾಗೂ ಹೊಸ ವರ್ಷವನ್ನು ಕುಟುಂಬದೊಂದಿಗೆ ಆಚರಿಸಬೇಕೆಂದು ಪಂತ್‌ ಮನೆಗೆ ಸಾಗುತ್ತಿದ್ದರು.

ತಾವು ನಿದ್ದೆಗೆ ಜಾರಿದ್ದರಿಂದ ಕಾರಿನ ಮೇಲೆ ನಿಯಂತ್ರಣ ತಪ್ಪಿ ಅಪಘಾತ ನಡೆದಿದೆ ಎಂದು ಪಂತ್‌ ಹೇಳಿದ್ದಾರೆ.

Similar News