ಸೋದರಿಯ ವಿವಾಹದಲ್ಲಿ ಪಾಲ್ಗೊಂಡು ಮತ್ತೆ ಜೈಲಿಗೆ ವಾಪಸಾದ ಉಮರ್‌ ಖಾಲಿದ್‌

Update: 2022-12-31 08:36 GMT

ಹೊಸದಿಲ್ಲಿ: ಈಶಾನ್ಯ ದಿಲ್ಲಿಯಲ್ಲಿ 2020 ರಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಯುಎಪಿಎ (UAPA) ಪ್ರಕರಣ ಎದುರಿಸುತ್ತಿರುವ ಹೋರಾಟಗಾರ ಉಮರ್‌ ಖಾಲಿದ್‌ (Umar Khalid) ತಮ್ಮ ಸಹೋದರಿಯ ವಿವಾಹದಲ್ಲಿ ಪಾಲ್ಗೊಂಡ ನಂತರ ಇಂದು ಮತ್ತೆ ಜೈಲಿಗೆ ಮರಳಿದ್ದಾರೆ.

ಎಂಟು ನೂರು ದಿನಗಳಿಗೂ ಹೆಚ್ಚು ಸಮಯ ಜೈಲಿನಲ್ಲಿದ್ದ ಖಾಲಿದ್‌ ಅವರಿಗೆ ಸೋದರಿಯ ವಿವಾಹದಲ್ಲಿ ಪಾಲ್ಗೊಳ್ಳಲು ಏಳು ದಿನಗಳ ಕಾಲಾವಕಾಶ ಒದಗಿಸಿ ಬಿಡುಗಡೆಗೊಳಿಸಲಾಗಿತ್ತು.

ಸೆಪ್ಟೆಂಬರ್‌ 2020 ರಿಂದ ಜೈಲಿನಲ್ಲಿರುವ ಖಾಲಿದ್‌ ಅವರಿಗೆ ಅಕ್ಟೋಬರ್‌ 18 ರಂದು ದಿಲ್ಲಿ ಹೈಕೋರ್ಟ್‌ ಜಾಮೀನು ನಿರಾಕರಿಸಿತ್ತು.

ನವೆಂಬರ್‌ 18 ರಂದು ಹಿರಿಯ ವಕೀಲರೊಬ್ಬರ ಮುಖಾಂತರ ಮಧ್ಯಂತರ ಜಾಮೀನಿಗಾಗಿ ಉಮರ್‌ ಖಾಲಿದ್‌ ಅರ್ಜಿ ಸಲ್ಲಿಸಿದ್ದರು ಹಾಗೂ ಖಾಲಿದ್‌ ಅವರ ಸೋದರಿಯ ವಿವಾಹ ಡಿಸೆಂಬರ್‌ ತಿಂಗಳಿನಲ್ಲಿ ನಡೆಯಲಿರುವುದರಿಂದ ಅವರಿಗೆ ಜಾಮೀನು ಒದಗಿಸಬೇಕೆಂದು ಅವರ ವಕೀಲರು ಕೋರಿದ್ದರು.

ಇದಕ್ಕೂ ಮೊದಲು ದಿಲ್ಲಿ ಪೊಲೀಸರು ಅವರ ಜಾಮೀನು ಅರ್ಜಿ ವಿರೋಧಿಸಿ ಅವರನ್ನು ಹೊರಬಿಟ್ಟರೆ ಅವರು ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಸುದ್ದಿ ಹರಡಿ ಅಶಾಂತಿಗೆ ಕಾರಣರಾಗಬಹುದು ಎಂದು ಹೇಳಿದ್ದರು.

ಇದನ್ನೂ ಓದಿ: ಮೈಸೂರಿನಲ್ಲಿ ಪ್ರಧಾನಿ ಮೋದಿ ಸಹೋದರನ ಕಾರು ಅಪಘಾತ ಪ್ರಕರಣ: ಚಾಲಕನ ವಿರುದ್ಧ FIR

Similar News