×
Ad

ಎಸ್.ವೈ.ಎಸ್. ತವಸ್ಸುಲ್ ಡೇ: ಉಳ್ಳಾಲದಲ್ಲಿ ಚಾಲನೆ

Update: 2023-01-01 09:40 IST

ಉಳ್ಳಾಲ, ಜ.1: ಕರ್ನಾಟಕ ರಾಜ್ಯ ಸುನ್ನೀ ಯುವಜನ (ಎಸ್.ವೈ.ಎಸ್.) ಸಂಘದ ಮೂವತ್ತನೇ ವರ್ಷಾಚರಣೆಯು ಜ.24ರಂದು ಶಿವಮೊಗ್ಗದಲ್ಲಿ ಉದ್ಘಾಟನೆಗೊಳ್ಳಲಿದೆ. ಈ ಪ್ರಯುಕ್ತ ಹಮ್ಮಿಕೊಂಡಿರುವ 'ತವಸ್ಸುಲ್ ಡೇ' ಕಾರ್ಯಕ್ರಮಕ್ಕೆ ಉಳ್ಳಾಲ ಸೈಯದ್ ಮದನಿ‌ ಮಖಾಂ ಶರೀಫ್‌ ಝಿಯಾರತ್‌ನೊಂದಿಗೆ ಎಸ್.ವೈ.ಎಸ್.ರಾಜ್ಯಾಧ್ಯಕ್ಷ ಡಾ.ಎಮ್ಮೆಸ್ಸೆಂ ಝೈನಿ ಕಾಮಿಲ್ ರವಿವಾರ ಬೆಳಗ್ಗೆ‌ ಚಾಲನೆ ನೀಡಿದರು.

ರಾಜ್ಯದ ಎಲ್ಲ ಸೆಂಟರ್‌ಗಳಲ್ಲಿ ಮಹಾತ್ಮರ ಮಖಾಂ ಝಿಯಾರತ್‌ಗಳು ಹಾಗೂ ಬ್ರಾಂಚ್ ಮಟ್ಟದಲ್ಲಿ ಸ್ಥಳೀಯ ಖಬರ್‌ಸ್ಥಾನಗಳಲ್ಲಿ ಸಾಮೂಹಿಕ ಝಿಯಾರತ್ ನಡೆಸುವ ಕಾರ್ಯಕ್ರಮ ಇದಾಗಿದ್ದು, ಇಂದು ಬೆಳಗ್ಗೆಯಿಂದ ಸಂಜೆಯವರೆಗೆ ನಡೆಯಲಿದೆ.

ಉಳ್ಳಾಲ ಸೈಯದ್ ಮದನಿ ಮಖಾಂ, ಮುಹಿಯುದ್ದೀನ್ ಬಾವಾ ಮಖಾಂ ಹಾಗೂ ಶೈಖುನಾ ಅಹ್ಮದ್ ಬಾವಾ ಉಸ್ತಾದ್ ಮಖಾಂಗಳಲ್ಲಿ ಝಿಯಾರತ್ ಬಳಿಕ ನಡೆದ ಹೃಸ್ವ ಸಮಾರಂಭದಲ್ಲಿ ಡಾ.ಝೈನಿ ಕಾಮಿಲ್ ಸಂದೇಶ ಭಾಷಣ ಮಾಡಿದರು.

ರಾಜ್ಯ ಕಾರ್ಯದರ್ಶಿ ಹನೀಫ್ ಹಾಜಿ ಉಳ್ಳಾಲ, ಕೆ.ಎಂ.ಸಿದ್ದೀಖ್ ಮೋಂಟುಗೋಳಿ ಶುಭ ಹಾರೈಸಿದರು.

ಕರ್ನಾಟಕ ಜಂಇಯ್ಯತುಲ್ ಉಲಮಾ ಮುಶಾವರ ಸದಸ್ಯ ಶಿಹಾಬುದ್ದೀನ್ ಸಖಾಫಿ ಉಳ್ಳಾಲ ಸ್ವಾಗತಿಸಿದರು. ಸೈಯದ್ ಜಲಾಲುದ್ದೀನ್ ತಂಙಳ್ ಉಳ್ಳಾಲ್ ವಂದಿಸಿದರು.

Similar News