ನಾನು ಗಾಂಧೀಜಿಯನ್ನು ದ್ವೇಷಿಸುತ್ತಿದ್ದೆ, ಈಗ ಅವರ ಅಭಿಮಾನಿ: ರಾಹುಲ್‌ ಜೊತೆಗಿನ ಸಂದರ್ಶನದಲ್ಲಿ ಕಮಲ್‌ ಹಾಸನ್

Update: 2023-01-02 09:29 GMT

ಹೊಸದಿಲ್ಲಿ: ನಟ-ರಾಜಕಾರಣಿ ಕಮಲ್ ಹಾಸನ್ ಅವರು ನಟಿಸಿದ ಮತ್ತು ಬರೆದು, ನಿರ್ಮಿಸಿ, ನಿರ್ದೇಶಿಸಿದ ಅವರ ಬಹು ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಲನಚಿತ್ರ ಹೇ ರಾಮ್ 
ಅನ್ನು ಅವರು ಮಹಾತ್ಮಾ ಗಾಂಧಿಯವರೊಂದಿಗೆ ಕ್ಷಮೆ ಯಾಚಿಸುವ ಮಾರ್ಗವಾಗಿತ್ತು  ಎಂದು ಹೇಳಿದ್ದಾರೆ.

ಕಮಲ್‌ ಹಾಸನ್ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೊಂದಿಗಿನ ಸಂಭಾಷಣೆಯಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ರಾಹುಲ್ ಗಾಂಧಿಯವರ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾದ ವೀಡಿಯೊದಲ್ಲಿ, ಕಮಲ್‌ ಹಾಸನ್‌ "ನನ್ನನ್ನು ನಾನು ಸರಿಪಡಿಸಿಕೊಳ್ಳಲು ಈ ಸಿನಿಮಾವನ್ನು ಮಾಡಿದ್ದೆ" ಎಂದು ಹೇಳಿದ್ದಾರೆ.

"ನಾನು ಈಗ ಗಾಂಧೀಜಿ ಬಗ್ಗೆ ಸಾಕಷ್ಟು ಮಾತನಾಡುತ್ತೇನೆ, ಆದರೆ ನಾನು ಮೊದಲೆಲ್ಲಾ ಹೀಗೆ ಇರಲಿಲ್ಲ. ನನ್ನ ತಂದೆ ಕಾಂಗ್ರೆಸ್ಸಿಗರಾಗಿದ್ದರು ಆದರೆ ನಾನು ಹದಿಹರೆಯದಲ್ಲಿದ್ದಾಗ ನನ್ನ ಪರಿಸರವು ನನ್ನನ್ನು ಗಾಂಧೀಜಿಯ ಕಟು ಟೀಕಾಕಾರನನ್ನಾಗಿ ಮಾಡಿತು. ನನ್ನ ತಂದೆ ಹೇಳಿದರು, ‘ನೀನು ಇತಿಹಾಸವನ್ನು ಇಂದಿನಿಂದ ಓದುತ್ತಿದ್ದಿ, ಮತ್ತು ಇಂದಿನಿಂದ ಮಾತನಾಡುತ್ತಿದ್ದಿʼ ಎಂದು. ಆದರೆ ʼಇಂದುʼ ಕೂಡಾ ಮುಖ್ಯವಾದುದು ಎಂದು ನಾನು ಹೇಳಿದ್ದೆ. ಅವರು ವಕೀಲ ವೃತ್ತಿ ನಡೆಸುತ್ತಿದ್ದರು, ಆದರೆ ಅವರು ಈ ಬಗ್ಗೆ ನನ್ನೊಂದಿಗೆ ವಾದಿಸಲಿಲ್ಲ, ” ಎಂದು ಕಮಲ್‌ ಹಾಸನ್‌ ಹೇಳಿದರು.

ಹಾಸನ್ ಅವರು ತಮ್ಮ 20 ರ ದಶಕದ ಮಧ್ಯಭಾಗದಲ್ಲಿ ಗಾಂಧಿ ಮತ್ತು ಅವರ ಬೋಧನೆಯ ಕಡೆಗೆ ಹೇಗೆ ಅಲೆಯಲು ಪ್ರಾರಂಭಿಸಿದರು ಮತ್ತು ಅಂತಿಮವಾಗಿ ಹೇ ರಾಮ್ ಸಿನಿಮಾ ನಿರ್ಮಾಣಕ್ಕೆ ಮುಂದಾದೆ ಎಂದು ನೆನಪಿಸಿಕೊಂಡರು. ಚಿತ್ರವು ಪರ್ಯಾಯ ಇತಿಹಾಸವನ್ನು ಅನುಸರಿಸಿತು ಮತ್ತು ಭಾರತದ ವಿಭಜನೆ ಹಾಗೂ ನಾಥುರಾಮ್ ಗೋಡ್ಸೆಯಿಂದ ಮಹಾತ್ಮ ಗಾಂಧಿಯವರ ಹತ್ಯೆಯನ್ನು ಚಿತ್ರಿಸುತ್ತದೆ.

"ನಾನು 24-25 ವರ್ಷದವನಾಗಿದ್ದಾಗ, ನಾನು ಗಾಂಧಿಜಿಯನ್ನು ನನ್ನದೇ ಆದ ಕಲ್ಪನೆಯ ಮತ್ತು ವಿಚಾರದ ಮೇಲೆ ಅಳೆದಿದ್ದೆ. ಬಳಿಕದ ವರ್ಷಗಳಲ್ಲಿ ನಾನು ಸಂಪೂರ್ಣವಾಗಿ ಅವರ ಅಭಿಮಾನಿಯಾಗಿದ್ದೇನೆ. ನಿಜವಾಗಿ ನಿಮ್ಮನ್ನು ಸರಿಪಡಿಸಿಕೊಳ್ಳಲು ಮತ್ತು ಕ್ಷಮಿಸಿ ಎಂದು ಹೇಳಲು, ಅದಕ್ಕಾಗಿಯೇ ನಾನು ಹೇ ರಾಮ್ ಅನ್ನು ಮಾಡಿದ್ದೇನೆ, ಅಲ್ಲಿ ನಾನು ನನ್ನನ್ನು ಸ್ವತಃ ಸರಿಪಡಿಸಿಕೊಳ್ಳಲು ಮತ್ತು ಗಾಂಧಿಯೊಂದಿಗೆ ಕ್ಷಮೆ ಕೇಳಲು ಹೇರಾಮ್‌ ಸಿನಿಮಾವನ್ನು ಮಾಡಿದ್ದೆ. ಅದರಲ್ಲಿ ನಾನು ಗಾಂಧಿ ಹಂತಕನಾಗಿ ಅಭಿನಯಿಸಿದ್ದೆ. ಗಾಂಧಿಯ ಹತ್ತಿರ ಹೋದಂತೆಯೇ ನಾನು ಬದಲಾಗುತ್ತೇನೆ. ಆದರೆ, ಆ ವೇಳೆ ತುಂಬಾ ತಡವಾಗಿತ್ತು. ಯಾರೋ ಗಾಂಧೀಜಿಯನ್ನು ಕೊಂದಿದ್ದರು. ನಿಜವಾಗಿ ಕೊಲ್ಲಲು ಹೋದವ ಗಾಂಧಿಯ ಪ್ರಭಾವಕ್ಕೊಳಗಾಗುತ್ತಾನೆ". ಇದಾಗಿದೆ ಈ ಸಿನಿಮಾದ ಕಥೆ ಎಂದು ಅವರು ಹೇಳಿದರು.

47 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ, ಹೇ ರಾಮ್ ಮೂರು ಗೌರವಗಳನ್ನು ಪಡೆದಿತ್ತು. ಈ ಚಿತ್ರವು ಆಸ್ಕರ್‌ಗೆ ಭಾರತದ ಸಲ್ಲಿಕೆಯಾಗಿತ್ತು ಆದರೆ ನಾಮನಿರ್ದೇಶನಗೊಂಡಿರಲಿಲ್ಲ. ಈ ಚಲನಚಿತ್ರವನ್ನು ತಮಿಳು ಮತ್ತು ಹಿಂದಿಯಲ್ಲಿ ಏಕಕಾಲದಲ್ಲಿ ನಿರ್ಮಿಸಲಾಯಿತು ಮತ್ತು ಸೂಪರ್‌ಸ್ಟಾರ್ ಶಾರುಖ್ ಖಾನ್ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

Full View

Similar News