9 ದಿನಗಳ ವಿರಾಮದ ನಂತರ ಉತ್ತರಪ್ರದೇಶದಲ್ಲಿ ಇಂದು ‘ಭಾರತ್ ಜೋಡೋ ಯಾತ್ರೆ’ ಪುನಾರಂಭ

Update: 2023-01-03 04:31 GMT

ಹೊಸದಿಲ್ಲಿ: ಒಂಬತ್ತು ದಿನಗಳ ವಿರಾಮದ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಅವರ ನೇತೃತ್ವದಲ್ಲಿ ನಡೆಯುತ್ತಿರುವ  ‘ಭಾರತ್ ಜೋಡೋ ಯಾತ್ರೆ’ ಇಂದು ಉತ್ತರ ಪ್ರದೇಶದಿಂದ ಪುನರಾರಂಭಗೊಳ್ಳಲಿದೆ. ಯಾತ್ರೆಯು ಇದುವರೆಗೆ 110 ದಿನಗಳಿಗಿಂತ ಹೆಚ್ಚು ಸಮಯದಲ್ಲಿ 3,000 ಕಿ.ಮೀ.ಕ್ರಮಿಸಿದೆ.

ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಿಂದ ಆರಂಭವಾದ ಯಾತ್ರೆಯು ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ , ಮಹಾರಾಷ್ಟ್ರ ಹಾಗೂ  ಹರ್ಯಾಣದ ಭಾಗಗಳನ್ನು ದಾಟಿ ಬಂದಿದೆ. ಇದು ಜಮ್ಮು ಮತ್ತು ಕಾಶ್ಮೀರದಲ್ಲಿ ಅಂತ್ಯಗೊಳ್ಳಲಿದೆ.

ಇದು ಭಾರತದ ಇತಿಹಾಸದಲ್ಲಿ ಯಾವುದೇ ಭಾರತೀಯ ರಾಜಕಾರಣಿ ನಡೆಸಿದ ಅತಿ ಉದ್ದದ ಕಾಲ್ನಡಿಗೆಯ ಯಾತ್ರೆ ಆಗಿದೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ.

ಜನವರಿ 26 ರಂದು ಶ್ರೀನಗರದಲ್ಲಿ ಕೊನೆಗೊಳ್ಳುವ ಯಾತ್ರೆಯ ನಂತರ, ಯಾತ್ರೆಯ ಸಂದೇಶವನ್ನು ಹರಡುವ ಉದ್ದೇಶದಿಂದ ಕಾಂಗ್ರೆಸ್ 'ಹಾಥ್ ಸೇ ಹಾಥ್ ಜೋಡೋ' ಅಭಿಯಾನವನ್ನು ಆರಂಭಿಸುತ್ತದೆ.

Similar News