×
Ad

ಚಳಿಗಾಳಿಯ ಹಿನ್ನೆಲೆ: ಲಕ್ನೊದಲ್ಲಿ ಜನವರಿ 4 ರಿಂದ 7 ರವರೆಗೆ ಶಾಲೆಗಳು ಬಂದ್

Update: 2023-01-03 10:16 IST

ಲಕ್ನೊ:  ಚಳಿಗಾಳಿಯ ಹಿನ್ನೆಲೆಯಲ್ಲಿ ಲಕ್ನೊ  ಶಾಲೆಗಳು ಜನವರಿ 4ರಿಂದ 7 ರ ತನಕ ಮುಚ್ಚಲ್ಪಡುತ್ತವೆ.  

ಹವಾಮಾನ ಇಲಾಖೆಯ ಶೀತ ಅಲೆಗಳ ಎಚ್ಚರಿಕೆಯಿಂದಾಗಿ ನಗರ ಹಾಗೂ  ಗ್ರಾಮೀಣ ಪ್ರದೇಶದ ಎಲ್ಲಾ ಸರಕಾರಿ ಹಾಗೂ  ಖಾಸಗಿ ಶಾಲೆಗಳಿಗೆ ರಜೆಯನ್ನು ನೀಡಲು  ಆದೇಶಿಸಲಾಗಿದೆ ಎಂದು ಲಕ್ನೋ ಜಿಲ್ಲಾ ಮ್ಯಾಜಿಸ್ಟ್ರೇಟ್ ಸೂರ್ಯಪಾಲ್ ಗಂಗ್ವಾರ್  ಹೇಳಿದ್ದಾರೆ.

ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಗಳ ಜೊತೆಗೆ (ತುರ್ತು ಸೇವೆಗಳನ್ನು ಹೊರತುಪಡಿಸಿ), ಆದೇಶವು ಕಸ್ತೂರಬಾ ಗಾಂಧಿ ವಸತಿ ಬಾಲಕಿಯರ ಶಾಲೆಗಳಿಗೂ ಅನ್ವಯಿಸುತ್ತದೆ.

Similar News