×
Ad

ಭಾರತ್‌ ಜೋಡೋ ಯಾತ್ರೆ: ರಾಹುಲ್‌ ಗಾಂಧಿಯೊಂದಿಗೆ ಹೆಜ್ಜೆ ಹಾಕಿದ ಮಾಜಿ ರಾ ಮುಖ್ಯಸ್ಥ

Update: 2023-01-03 19:38 IST

ಹೊಸದಿಲ್ಲಿ: 9 ದಿನಗಳ ವಿರಾಮದ ಬಳಿಕ ಭಾರತ್ ಜೋಡೋ ಯಾತ್ರೆ ಪುನರಾರಂಭಗೊಂಡಿದ್ದು, ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (RAW) ನ ಮಾಜಿ ಮುಖ್ಯಸ್ಥ ಅಮರ್ಜಿತ್ ಸಿಂಗ್ ದುಲಾತ್ ಅವರು ಮಂಗಳವಾರ ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ.

 ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ನಡೆಯುತ್ತಿರುವ ಅಮರ್ಜಿತ್‌ ಸಿಂಗ್‌ ಅವರ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರ ಗಮನ ಸೆಳೆದಿದೆ.

ಕಾಂಗ್ರೆಸ್ ತನ್ನ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡ ಚಿತ್ರದಲ್ಲಿ, ಮಾಜಿ ರಾ ಮುಖ್ಯಸ್ಥರು ದಿಲ್ಲಿಯ ಬಾಬರ್‌ಪುರ ಪ್ರದೇಶದಲ್ಲಿ ಪಾದಯಾತ್ರೆ ಸಾಗುತ್ತಿರುವಾಗ, ರಾಹುಲ್ ಗಾಂಧಿಯ ಕೈ ಹಿಡಿದು ನಡೆಯುತ್ತಿರುವುದು ಕಾಣಬಹುದು.

ಇದಕ್ಕೂ ಮೊದಲು, ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮಾಜಿ ಗವರ್ನರ್ ರಘುರಾಮ್ ರಾಜನ್ ಕಳೆದ ತಿಂಗಳು ರಾಜಸ್ಥಾನದಲ್ಲಿ ಭಾರತ್ ಜೋಡೋ ಯಾತ್ರೆಗೆ ಸೇರಿಕೊಂಡಿದ್ದರು. ಡಿಸೆಂಬರ್ 24 ರಂದು ದಿಲ್ಲಿಯಲ್ಲಿ ನಡೆದ ಮೆರವಣಿಗೆಯಲ್ಲಿ ನಟ ಮತ್ತು ಮಕ್ಕಳ್ ನೀಧಿ ಮೈಯಂ (ಎಂಎನ್‌ಎಂ) ಮುಖ್ಯಸ್ಥ ಕಮಲ್ ಹಾಸನ್ ಕೂಡ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ಇದಲ್ಲದೆ, ಬಾಲಿವುಡ್ ನಟರಾದ ಪೂಜಾ ಭಟ್, ಸ್ವರಾ ಭಾಸ್ಕರ್ ಸೇರಿದಂತೆ ಇತರರು ಮೆರವಣಿಗೆಯಲ್ಲಿ ಗಾಂಧಿಯವರೊಂದಿಗೆ ನಡೆದಿದ್ದರು.

Similar News