ಬಿಎಸ್ಎಫ್‌ ನಿಂದ ಪಂಜಾಬ್ ಗಡಿಯಲ್ಲಿ ಇಬ್ಬರು ಪಾಕ್ ಒಳನುಸುಳುಕೋರರ ಹತ್ಯೆ

Update: 2023-01-03 15:46 GMT

ಚಂಡಿಗಢ, ಜ. 3: ಪಂಜಾಬ್ ನ  ಭಾರತ-ಪಾಕಿಸ್ತಾನದ ಗಡಿಯಲ್ಲಿ ಮಂಗಳವಾರ ನಡೆದ ಎರಡು ಪ್ರತ್ಯೇಕ ಘಟನೆಗಳಲ್ಲಿ ಗಡಿ ಭದ್ರತಾ ಪಡೆ  (ಬಿಎಸ್ಎಫ್)ಪಾಕಿಸ್ತಾನದ ಇಬ್ಬರು ಶಸಸ್ತ್ರ ಒಳನುಸುಳುಕೋರರನ್ನು ಗುಂಡು ಹಾರಿಸಿ ಹತ್ಯೆಗೈದಿದೆ.

ಮೊದಲನೆ ಘಟನೆ ಗುರುದಾಸ್ಪುರ ಸೆಕ್ಟರ್ ನ ಚನ್ನಾದ ಗಡಿ ಠಾಣೆಯಲ್ಲಿ  ನಡೆದಿದೆ. ಬಿಎಸ್ಎಫ್  ಬೆಳಗ್ಗೆ ಸುಮಾರು 8.30ಕ್ಕೆ ಶಸಸ್ತ್ರ ಪಾಕ್ ನುಸುಳುಕೋರನೋರ್ವನ ಶಂಕಾಸ್ಪದ ಚಲನವಲನವನ್ನು ಗಮನಿಸಿತು. ನುಸುಳುಕೋರ ಗುಂಡಿನ ದಾಳಿ ನಡೆಸಿದ. ಬಿಎಸ್ಎಫ್ ಪ್ರತಿದಾಳಿ ನಡೆಸಿ ಆತನನ್ನು ಹತ್ಯೆಗೈದಿತು ಎಂದು ಬಿಎಸ್ಎಫ್ನ ವಕ್ತಾರ ತಿಳಿಸಿದ್ದಾರೆ.

ಎರಡನೇ ಘಟನೆ ಅಮೃತಸರದ ದರಿಯಾ ಮನ್ಸೂರ್ ಗ್ರಾಮದ ಸಮೀಪ ನಡೆದಿದೆ. ಗಡಿಯೊಳಗೆ ಪ್ರವೇಶಿಸದಂತೆ ಗಡಿ ಭದ್ರತಾ ಪಡೆ ನುಸುಳುಕೋರನಿಗೆ ಎಚ್ಚರಿಕೆ ನೀಡಿತು. ಆದರೆ, ಆತ ಮುಂದುವರಿದ. ಅಪಾಯ ಅರಿತ ಬಿಎಸ್ಎಫ್ ಗುಂಡು ಹಾರಿಸಿ ಆತನನ್ನು ಹತ್ಯೆಗೈದಿತು. ಪಾಕಿಸ್ತಾನದ ನುಸುಳುಕೋರನ ಮೃತದೇಹದ ಸಮೀಪ ಬಂದೂಕು ಪತ್ತೆಯಾಗಿದೆ ಎಂದು ವಕ್ತಾರ ತಿಳಿಸಿದ್ದಾರೆ. 

Similar News