ews ಅಪಾಯದ ಬಗ್ಗೆ ಎಚ್ಚರಿಸುವ ಜಾಹೀರಾತು

Update: 2023-01-03 18:29 GMT

‘ಭಾರತ ಸರಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಕಚೇರಿ’ಯ ‘ಬೇಯರ್ ಫೆಲೋಶಿಪ್’ನ ಈ ಜಾಹೀರಾತು ಗಮನಿಸಿ.

 ‘‘ರೂ. 20,000 ಫೆಲೋಶಿಪ್‌ನ ಸ್ನಾತಕೋತ್ತರ ಮತ್ತು 40,000 ರೂ. ಫೆಲೋಶಿಪ್‌ನ ಸಂಶೋಧನೆ (msc & phd) ಕೋರ್ಸ್ ಗೆ ಸಂಪೂರ್ಣವಾಗಿ ews ಮಾತ್ರ’’ ಎಂದು ನಿಬಂಧನೆ ಹಾಕಿದ್ದಾರೆ. ಸಾಮಾಜಿಕ ನ್ಯಾಯದ ನೀತಿಯನ್ನು ಉಲ್ಲಂಘಿಸಿದ್ದಾರೆ. ews ಅಪಾಯದ ಕುರಿತು ಮೂರು ವರ್ಷಗಳಿಂದಲೂ ಎಚ್ಚರಿಸುತ್ತಿದ್ದೆವು. ಈಗ ಅದು ನಿಜವಾಗುತ್ತಿದೆ.
ews ಎನ್ನುವುದೇ ಸಾಮಾಜಿಕ ಅನ್ಯಾಯ ನೀತಿಯಾಗಿದೆ. ವಂಚಿತ ಸಮುದಾಯಗಳ ಪ್ರಾತಿನಿಧ್ಯಕ್ಕಾಗಿ ಜಾರಿಗೊಂಡ ಮೀಸಲಾತಿ ಕುರಿತು ಇಲ್ಲಿನ ಮೇಲ್ಜಾತಿಗಳಿಗೆ ಮುಂಚಿನಿಂದಲೂ ಅಸಹನೆಯಿತ್ತು. ಆದರೆ ಸಂವಿಧಾನದ ವಿಧಿಯನ್ನು ಮೀರಲು ಸಾಧ್ಯವಿಲ್ಲದೆ ಒಳಗೇ ಕುದಿಯುತ್ತಿದ್ದರು.
ಆದರೆ ಮೋದಿ ನೇತೃತ್ವದ ಬಿಜೆಪಿ ಸರಕಾರ ಈ ಮೇಲ್ಜಾತಿಗಳಿಗಾಗಿಯೇ ಜಾರಿಗೊಳಿಸಿದ ewsನ್ನು ಪ್ರತೀ ಹಂತದಲ್ಲೂ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ‘ewsನವರಿಗೆ ಮಾತ್ರ’ ಎಂದು ಹೇಳಿರುವ ಮೇಲಿನ ಜಾಹೀರಾತು ಸ್ಪಷ್ಟ ಉದಾಹರಣೆ. ಕ್ರಮೇಣ ಮೀಸಲಾತಿಯನ್ನು ಅಪ್ರಸ್ತುತಗೊಳಿಸುವುದೇ ಇವರ ಗುರಿಯಾಗಿರುವುದು ಉತ್ಪ್ರೇಕ್ಷೆಯಲ್ಲ. ಮೇಲಿನ ಸಾಮಾಜಿಕ ಅನ್ಯಾಯಕ್ಕೆ ಯಾರು ಹೊಣೆಗಾರರು?

Similar News