ಉಡುಪಿಯಲ್ಲಿ ಮರಗಳ ತೆರವು: ಜ.16ರಂದು ಸಾರ್ವಜನಿಕ ಅಹವಾಲು ಸಭೆ
Update: 2023-01-04 20:16 IST
ಉಡುಪಿ: ವಾರಾಹಿ ಏತ ನೀರಾವರಿ ಯೋಜನಾ ಕಾಮಗಾರಿಗೆ ಸಂಬಂಧಿಸಿದಂತೆ, ಕುಂದಾಪುರ ತಾಲೂಕು ಹಾಲಾಡಿ ಗ್ರಾಮದ ಸ.ನಂ. 139 ರಲ್ಲಿ ಕಾಲುವೆ ನಿರ್ಮಾಣಕ್ಕೆ ಅಡಚಣೆಯಾಗುವ ಒಟ್ಟು 343 ವಿವಿಧ ಜಾತಿಯ ಮರಗಳನ್ನು ತೆರವುಗೊಳಿಸುವ ಹಿನ್ನೆಲೆಯಲ್ಲಿ ಜನವರಿ 16ರಂದು ಅಪರಾಹ್ನ 3:00 ಗಂಟೆಗೆ ಶಂಕರನಾರಾಯಣ ವಲಯ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ಸಾರ್ವಜನಿಕ ಅಹವಾಲು ಸಭೆ ನಡೆಯಲಿದೆ.
ಈ ಕುರಿತು ಆಕ್ಷೇಪಣೆಗಳಿದ್ದಲ್ಲಿ ಸಾರ್ವಜನಿಕರು ಸಭೆಯಲ್ಲಿ ಹಾಜರಾಗಿ ಅಥವಾ 16ಕ್ಕೆ ಮುನ್ನ ವೃಕ್ಷಅಧಿಕಾರಿ ಹಾಗೂ ಉಪಅರಣ್ಯ ಸಂರಕ್ಷಣಾಧಿಕಾರಿ, ಕುಂದಾಪುರ ವಿಭಾಗ ಇವರಿಗೆ ಲಿಖಿತರೂಪದಲ್ಲಿ ಅಥವಾ ಇ-ಮೇಲ್ -kpurforest@yahoo.com- ಮೂಲಕ ಸಲ್ಲಿಸಬಹುದಾಗಿದೆ ಎಂದು ಕುಂದಾಪುರ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.