ಕಾರ್ಕಳ: ಹಲ್ಲೆ, ಕೊಲೆ ಬೆದರಿಕೆ
Update: 2023-01-04 22:38 IST
ಕಾರ್ಕಳ: ಅತ್ತೆ ಮನೆಗೆಂದು ತೆರಳಿದ್ದಾಗ ಆಸ್ತಿಯ ವಿಚಾರದ ತಕರಾರಿನ ಹಿನ್ನೆಲೆ ಹಲ್ಲೆ ನಡೆಸಿದ್ದಾರೆ ಎಂದು ಕಾರ್ಕಳ ತೆಳ್ಳಾರಿನ ಸ್ಮಿತಾ ಎನ್ನುವರು ಠಾಣೆಗೆ ದೂರು ನೀಡಿದ್ದಾರೆ.
ಕಾರ್ಕಳ ತಾಲೂಕು ಮುಡಾರು ಗ್ರಾಮದ ಕಡಾರಿ ಎಂಬಲ್ಲಿರುವ ನಿವಾಸಕ್ಕೆ ತೆರಳಿದ್ದಾಗ ಆರೋಪಿಗಳಾದ ಅಶೋಕ್ ನಾಯಕ್ ಹಾಗೂ ಆರತಿ ಅಶೋಕ್ ನಾಯಕ್ ಆಸ್ತಿ ವಿಚಾರದಲ್ಲಿ ತಗಾದೆ ತೆಗೆದು ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾರೆಂದು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.