×
Ad

ಉಡುಪಿ: ಜ.9ಕ್ಕೆ ಬೃಹತ್ ಆರೋಗ್ಯ ತಪಾಸಣಾ ಮೇಳ

Update: 2023-01-06 19:14 IST

ಉಡುಪಿ: ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ರಾಜ್ಯ ಶಾಖೆ, ಉಡುಪಿ ಜಿಲ್ಲಾ ಘಟಕ, ಜಮೀಯ್ಯತುಲ್ ಫಲಾಹ್ ಕಾಪು ಘಟಕ ಹಾಗೂ ಯೆನಪೋಯ ಮೆಡಿಕಲ್ ಕಾಲೇಜು ದೇರಳಕಟ್ಟೆ ಮಂಗಳೂರು ಇವರ ಸಹಯೋಗದೊಂದಿಗೆ ಬೃಹತ್ ಆರೋಗ್ಯ ತಪಾಸಣಾ ಮೇಳ ಹಾಗೂ ಉಚಿತ ಮಹಿಳಾ ಸ್ವಾಸ್ಥ್ಯ ಸಂರಕ್ಷಣಾ ತಪಾಸಣೆ ಕಾರ್ಯಕ್ರಮ ಜ.9ರಂದು ಬೆಳಗ್ಗೆ 9:30ಕ್ಕೆ  ಕಾಪುನ ಮಲ್ಲಾರ್ ಪಕೀರ್ನಕಟ್ಟೆ ಇಲ್ಲಿನ ಆಯುರ್ವೇದ ಚಿಕಿತ್ಸಾಲಯದಲ್ಲಿ ನಡೆಯಲಿದೆ.

ಶಿಬಿರವನ್ನು ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಉದ್ಘಾಟಿಸಲಿದ್ದು, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಶಾಖೆಯ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ.

ಯೆನಪೋಯ ಮೆಡಿಕಲ್ ಕಾಲೇಜಿನ ಸ್ತ್ರೀರೋಗ, ಮೆಡಿಸಿನ್, ದಂತ ವೈದ್ಯಕೀಯ ವಿಭಾಗದ ತಜ್ಞರು ಶಿಬಿರದಲ್ಲಿ ಭಾಗವಹಿಸಲಿದ್ದು, ಮಧುಮೇಹ, ಸ್ತ್ರೀರೋಗ, ಗರ್ಭಕೋಶ ಕಂಠ ಪರೀಕ್ಷೆಗಳನ್ನು ಸ್ಥಳದಲ್ಲಿಯೇ ಮಾಡಲು ವಿಶೇಷ ಸುಸಜ್ಜಿತ ಯಂತ್ರೋಪಕರಣ ಹೊಂದಿರುವ ಬೃಹತ್ ವಾಹನದ ವ್ಯವಸ್ಥೆ ಲಭ್ಯವಿರುತ್ತದೆ ಎಂದು ರೆಡ್‌ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Similar News