ಉಡುಪಿ: ಸರ್ವೇ ಕಾರ್ಯದಲ್ಲಿ ಮಾಹಿತಿ ನೀಡಲು ಸೂಚನೆ
Update: 2023-01-06 19:20 IST
ಉಡುಪಿ: ಇ- ಆಸ್ತಿ ತಂತ್ರಾಂಶವನ್ನು ಸರಳೀಕರಣಗೊಳಿಸಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕೆಎಂಎಫ್ -24 ಗಣಕೀಕರಣ ಕಾರ್ಯವನ್ನು 2023ರ ಫೆಬ್ರವರಿ ಅಂತ್ಯದ ಒಳಗೆ ಕಾಲೋಚಿತ ಗೊಳಿಸಬೇಕಾಗಿರುವುದರಿಂದ ಉಡುಪಿ ನಗರಸಭೆಯ ಸಿಬ್ಬಂದಿಗಳು ಮನೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರು ಕುಟುಂಬದ ದಾಖಲೆಯ ಹೆಸರು, ಮಾಲಕರ ಭಾವಚಿತ್ರ, ಸ್ವತ್ತಿನ ಭಾವಚಿತ್ರ, ಮಾಲಕರ ಗುರುತಿನ ದಾಖಲೆ, ತೆರಿಗೆ ಪಾವತಿ ರಶೀದಿ, ಮಾಲೀಕತ್ವದ ದಾಖಲಾತಿ, ಕಟ್ಟಡ ಪರವಾನಿಗೆ, ದಸ್ತಾವೇಜು, ಅಕ್ಯುಪೆನ್ಸಿ ಸರ್ಟಿಫಿಕೇಟ್ ಹಾಗೂ ಇನ್ನಿತರ ದಾಖಲೆ ನೀಡಿ ಈ ಸರ್ವೇ ಕಾರ್ಯದಲ್ಲಿ ನಗರಸಭೆಯೊಂದಿಗೆ ಸಹಕರಿಸುವಂತೆ ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.