ಮಧ್ಯಪ್ರದೇಶ: ತರಬೇತಿ ವಿಮಾನ ಪತನ; ಪೈಲಟ್ ಸಾವು `
Update: 2023-01-06 20:32 IST
ರೇವಾ, ಜ. 6: ಮಧ್ಯಪ್ರದೇಶದ ರೇವಾ ಜಿಲ್ಲೆಯಲ್ಲಿ ತರಬೇತಿ ವಿಮಾನವೊಂದು ಪತನಗೊಂಡಿದ್ದು, ಪೈಲಟ್ ಮೃತಪಟ್ಟಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಗುರುವಾರ ರಾತ್ರಿ ಸುಮಾರು 11.30ಕ್ಕೆ ಅಪಘಾತ ಸಂಭವಿಸಿದ್ದು, ವಿಮಾನದಲ್ಲಿದ್ದ ತರೇಬೇತಿ ಪಡೆಯುತ್ತಿದ್ದ ಪೈಲಟ್ ಗಾಯಗೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.
ತರಬೇತಿಯಲ್ಲಿದ್ದಾಗ ವಿಮಾನ ದೇವಾಲಯವೊಂದರ ಗೋಪುರ ಹಾಗೂ ಮರಕ್ಕೆ ಢಿಕ್ಕಿ ಹೊಡೆದು ಚೋರ್ಹಟ್ಟ ಏಯರ್ಸ್ಟ್ರಿಪ್ನಿಂದ ಮೂರು ಕಿ.ಮೀ. ದೂರದಲ್ಲಿ ಪತನಗೊಂಡಿತು ಎಂದು ಚೊರ್ಹಟ್ಟ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಜೆ.ಪಿ. ಪಟೇಲ್ ಅವರು ತಿಳಿಸಿದ್ದಾರೆ. ಅಪಘಾತದಲ್ಲಿ ಕ್ಯಾಪ್ಟನ್ ವಿಶಾಲ್ ಯಾದವ್ (30)(Vishal Yadav) ಮೃತಪಟ್ಟಿದ್ದಾರೆ. ತರಬೇತು ಪಡೆಯುತ್ತಿದ್ದ ಪೈಲಟ್ ಅಂಶುಲ್ ಯಾದವ್ ಗಾಯಗೊಂಡಿದ್ದಾರೆ. ಅವರನ್ನು ಸರಕಾರಿ ಸಂಜಯ್ ಗಾಂಧಿ ವೈದ್ಯಕೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.