Fact Check: ಸರಸ್ವತಿಯ ಫೋಟೋವನ್ನು ತುಳಿದು ಅವಮಾನಿಸಿದ ವ್ಯಕ್ತಿ ಮುಸ್ಲಿಮನಲ್ಲ

Update: 2023-01-06 17:13 GMT

ಹೊಸದಿಲ್ಲಿ: ಹಿಂದೂ ದೇವತೆ ಸರಸ್ವತಿಯ ಫೋಟೋವನ್ನು ವ್ಯಕ್ತಿಯೊಬ್ಬ ಕಾಲಿನಲ್ಲಿ ಒದೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಸರಸ್ವತಿಯ ಚಿತ್ರಕ್ಕೆ ಮುಸ್ಲಿಂ ವ್ಯಕ್ತಿಯೊಬ್ಬ ಒದೆಯುತ್ತಿದ್ದಾನೆಂಬ ಅಡಿ ಬರಹದೊಂದಿಗೆ ಈ ದೃಶ್ಯವನ್ನು ವ್ಯಾಪಕವಾಗಿ ಹಂಚಲಾಗುತ್ತಿದೆ.

ದೃಶ್ಯದ ಬಗ್ಗೆ quint ಸಂಸ್ಥೆಯು ಫ್ಯಾಕ್ಟ್‌ ಚೆಕ್‌ ಮಾಡಿದ್ದು, ಘಟನೆ ಎಲ್ಲಿ ನಡೆದಿದೆ, ಮತ್ತು ಅದರ ಹಿನ್ನೆಲೆಯೇನು ಎನ್ನುವುದನ್ನು ಸಂಸ್ಥೆ ಪರಿಶೀಲನೆ ಮಾಡಿದೆ. The Quint ಪ್ರಕಾರ ಈ ಘಟನೆಯು ಗುಜರಾತ್‌ನ ಛೋಟೌಡೆಪುರ್ ಜಿಲ್ಲೆಯಲ್ಲಿ 28 ಡಿಸೆಂಬರ್ 2022 ರಂದು ನಡೆದಿದೆ.

ಸತ್ಯಾಂಶವೇನು?: ಗೆಲೆಸರ್ ಗ್ರಾಮದ ಪ್ರಾಥಮಿಕ ಶಾಲೆಯೊಂದರ ಶಿಕ್ಷಕನೊಬ್ಬ ಕುಡಿದ ಮತ್ತಿನಲ್ಲಿ ಈ ಕೃತ್ಯ ಎಸಗಿದ್ದಾನೆ ಎಂದು ಪತ್ತೆಯಾಗಿದೆ. ಶಿಕ್ಷಕನನ್ನು ಯೋಗೇಶ್ ರಾತ್ವಾ ಎಂದು ಗುರುತಿಸಲಾಗಿದ್ದು, ಆತ ಮುಸ್ಲಿಂ ಸಮುದಾಯಕ್ಕೆ ಸೇರಿದವನಲ್ಲ ಎಂದು ವರದಿ ಹೇಳಿದೆ.

  

 ಘಟನೆಯ ಹಿನ್ನೆಲೆಯಲ್ಲಿ ದಿ ಕ್ವಿಂಟ್ ಜೊತೆ ಮಾತನಾಡಿದ ಛೋಟೌದೇಪುರ್ ಎಸ್ಪಿ ಧರ್ಮೇಂದ್ರ ಶರ್ಮಾ, "ವೀಡಿಯೊದಲ್ಲಿರುವ ವ್ಯಕ್ತಿ ಮುಸ್ಲಿಂ ಸಮುದಾಯದವನಲ್ಲ, ಅವನು ಹಿಂದೂ ಆದಿವಾಸಿ, ಅವನ ಹೆಸರು ಯೋಗೇಶ್ ರಾಥ್ವಾ, ಅವನು ಇದನ್ನು ಮಾಡುವಾಗ ಮದ್ಯದ ಅಮಲಿನಲ್ಲಿದ್ದ. ಅಲ್ಲದೆ, ಘಟನೆ ಬಳಿ ಆತನನ್ನು ಬಂಧಿಸಲಾಗಿದೆ” ಎಂದು ತಿಳಿಸಿದ್ದಾರೆ.

  

Similar News