×
Ad

ಬ್ರಹ್ಮಾವರ: ಉಸಿರಾಟದ ಸಮಸ್ಯೆಯಿಂದ ಯುವಕ ಮೃತ್ಯು

Update: 2023-01-06 22:36 IST

ಬ್ರಹ್ಮಾವರ: ಉಸಿರಾಟದ ಸಮಸ್ಯೆ ಏಕಾಏಕಿ ಉಲ್ಬಣಗೊಂಡು ಯುವಕನೋರ್ವ ಮೃತಪಟ್ಟ ಘಟನೆ ಬ್ರಹ್ಮಾವರ ತಾಲೂಕಿನ ಕೊಕ್ಕರ್ಣೆ ಪೆಜಮಂಗೂರು ಎಂಬಲ್ಲಿ ಜ.6ರಂದು ನಡೆದಿದೆ.

ಪೆಜಮಂಗೂರಿನ ಮೊಗವೀರ ಪೇಟೆ ನಿವಾಸಿ ಗಣೇಶ್ (23) ಮೃತ ಯುವಕ. ಇವರು ಸುಮಾರು 5 ವರ್ಷಗಳಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು, ಈ ಬಗ್ಗೆ ಮಾನಸಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಇಂದು ಮುಂಜಾನೆ ತೀವ್ರ ಉಸಿರಾಟದ ಸಮಸ್ಯೆಯಿಂದ ಒದ್ದಾಡುತ್ತಿದ್ದರು. ತಕ್ಷಣವೇ ಮನೆಯವರು ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಢು ಹೋಗಿದ್ದು, ಅಲ್ಲಿ ಪರೀಕ್ಷಿಸಿದ ವೈದ್ಯರು ಗಣೇಶ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News