ಕಾಪು: ಸಮುದ್ರಕ್ಕೆ ಬಿದ್ದ ಮೀನುಗಾರನ ಮೃತದೇಹ ಪತ್ತೆ
Update: 2023-01-06 22:38 IST
ಕಾಪು: ಮೂರು ದಿನಗಳ ಹಿಂದೆ ಮೀನುಗಾರಿಕೆ ಬೋಟಿನಿಂದ ಸಮುದ್ರಕ್ಕೆ ಬಿದ್ದು ನಾಪತ್ತೆಯಾಗಿದ್ದ ಮೀನುಗಾರನ ಮೃತದೇಹ ಕಾಪು ಸಮುದ್ರ ತೀರದಲ್ಲಿ ಜ.6ರಂದು ಪತ್ತೆಯಾಗಿದೆ.
ಪೆರುವಾಯಿ ಮೂಲದ ಆನಂದ (36) ಮೃತ ಮೀನುಗಾರ. ಮಂಗಳೂರು ಬಂದರಿನಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದನು. ಅವರು ಜ.3ರಂದು ಮುಂಜಾನೆ ಮೀನು ಹಿಡಿಯುವ ಕೆಲಸಕ್ಕೆ ಬಂದರಿಗೆ ಹೋಗಿದ್ದು, ಬೋಟ್ ದಂಡೆಯ ಮೇಲಿನಿಂದ ಆಕಸ್ಮಿಕವಾಗಿ ಜಾರಿ ಸಮುದ್ರಕ್ಕೆ ಬಿದ್ದಿದ್ದರು. ಅವರನ್ನು ಸಮುದ್ರದಲ್ಲಿ ಹುಡುಕಾಡಿದಲ್ಲಿ ಪತ್ತೆಯಾಗಿರಲಿಲ್ಲ. ಶುಕ್ರವಾರ ಬೆಳಿಗ್ಗೆ ಕಾಪು ಸಮುದ್ರ ತೀರದಲ್ಲಿ ಮೃತದೇಹ ಪತ್ತೆಯಾಗಿದೆ.
ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.