ವೃತ್ತಿಪರ ಟೆನಿಸ್‌ಗೆ ನಿವೃತ್ತಿ ಪ್ರಕಟಿಸಿದ ಸಾನಿಯಾ ಮಿರ್ಝಾ

Update: 2023-01-07 06:06 GMT

ಹೊಸದಿಲ್ಲಿ: ಭಾರತದ ಹಿರಿಯ ಟೆನಿಸ್ ತಾರೆ ಸಾನಿಯಾ ಮಿರ್ಜಾ ವೃತ್ತಿಪರ ಟೆನಿಸ್‌ಗೆ ನಿವೃತ್ತಿ ಘೋಷಿಸಿದ್ದಾರೆ.

 ವಿಶ್ವದ ಮಾಜಿ ನಂ.1 ಡಬಲ್ಸ್ ಆಟಗಾರ್ತಿ ಸಾನಿಯಾ  ಫೆಬ್ರವರಿಯಲ್ಲಿ ದುಬೈನಲ್ಲಿ ನಡೆಯುವ WTA 1000 ಈವೆಂಟ್‌ನಲ್ಲಿ ನಿವೃತ್ತಿ ಹೊಂದುವುದಾಗಿ ಘೋಷಿಸಿದ್ದಾರೆ.

ಮಹಿಳಾ ಟೆನಿಸ್ ಅಸೋಸಿಯೇಶನ್ (ಡಬ್ಲ್ಯುಟಿಎ) ವೆಬ್‌ಸೈಟ್‌ಗೆ ನೀಡಿದ ಸಂದರ್ಶನದಲ್ಲಿ 36ರ ವಯಸ್ಸಿನ  ಮಿರ್ಝಾ  ತಮ್ಮ ನಿವೃತ್ತಿಯ ಬಗ್ಗೆ ಮಾತನಾಡಿದರು.

ಹೈದರಾಬಾದ್ ಆಟಗಾರ್ತಿ  ಸಾನಿಯಾ ಈ ಮೊದಲು  2022ರ ಕೊನೆಯಲ್ಲಿ ನಿವೃತ್ತಿಯಾಗಲು ಉದ್ದೇಶಿಸಿದ್ದರು. ಆದರೆ ಮೊಣಕೈ ಗಾಯವು ಅವರನ್ನು ಅಮೆರಿಕನ್ ಓಪನ್‌ನಿಂದ ಹೊರಗುಳಿಯುವಂತೆ ಮಾಡಿತು.

 ಡಬಲ್ಸ್‌ನಲ್ಲಿ ಮೂರು ಹಾಗೂ ಮಿಶ್ರ ಡಬಲ್ಸ್‌ನಲ್ಲಿ ಮೂರು ಸಹಿತ ಆರು ಬಾರಿ ಗ್ರ್ಯಾನ್ ಸ್ಲಾಮ್  ಚಾಂಪಿಯನ್ ಆಗಿರುವ  ಸಾನಿಯಾ ಮಿರ್ಝಾ  ದೇಶದ ಓರ್ವ ಶ್ರೇಷ್ಠ ಮಹಿಳಾ ಟೆನಿಸ್ ಆಟಗಾರ್ತಿಯಾಗಿದ್ದಾರೆ. ಈ ತಿಂಗಳ ಆಸ್ಟ್ರೇಲಿಯನ್ ಓಪನ್‌ನಲ್ಲಿ ಕಝಾಕಿಸ್ತಾನ್‌ನ ಅನ್ನಾ ಡ್ಯಾನಿಲಿನಾ ಅವರೊಂದಿಗೆ ಸ್ಪರ್ಧಿಸಲು ಸಹಿ ಹಾಕಿದ್ದಾರೆ. ಇದು ಅವರ ಕೊನೆಯ ಗ್ರ್ಯಾನ್ ಸ್ಲಾಮ್ ಟೂರ್ನಿ ಆಗಲಿದೆ.  

Similar News