×
Ad

ಕುಂದಾಪುರ: ಎಸೆಸೆಲ್ಸಿ ವಿದ್ಯಾರ್ಥಿಗಳ ಪರೀಕ್ಷಾ ಪೂರ್ವ ತಯಾರಿ ಕಾರ್ಯಾಗಾರ

Update: 2023-01-07 21:00 IST

ಕುಂದಾಪುರ: ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳು ಗಿಣಿಪಾಠ ಮಾಡಬಾರದು. ನಮಗೆ ಪಾಠ ಹೇಗೆ ಅರ್ಥವಾಗಿದೆ, ಹಾಗೆ ಬರೆದರೆ ಜಾಸ್ತಿ ಅಂಕ ಸಿಗುತ್ತದೆ ಎಂದು ಕುಂದಾಪುರ ಉಪವಿಭಾಗಾಧಿಕಾರಿ ರಾಜು ಕೆ. ಹೇಳಿದ್ದಾರೆ.

ಉಡುಪಿ ಜಿಲ್ಲಾ ಪಂಚಾಯತ್, ಐಡಿಡಿಪಿ ಇಲಾಖೆ, ಕುಂದಾಪುರ ಸಮಾಜ ಕಲ್ಯಾಣ ಇಲಾಖೆ ಆಶ್ರಯದಲ್ಲಿ ಶನಿವಾರ ಇಲ್ಲಿನ ವಾಲ್ಮಿಕಿ ಆಶ್ರಮ ಶಾಲೆಯಲ್ಲಿ ನಡೆದ ಎಸೆಸೆಲ್ಸಿ ವಿದ್ಯಾರ್ಥಿಗಳ ಪರೀಕ್ಷಾ ಪೂರ್ವ ತಯಾರಿ ಕಾರ್ಯಾಗಾರದಲ್ಲಿ ಅವರು ವಿದ್ಯಾರ್ಥಿಗಳಿಗೆ ಪಾಠ ಮಾಡಿದರು. 

ಒಮ್ಮೆ ನಿಮ್ಮ ಪುಸ್ತಕದ ಪ್ರಾಮುಖ್ಯ ವಿಷಯಗಳ ಮೇಲೆ ಕಣ್ಣಾಡಿಸಿ, ನಂತರ ಇಡಿ ಪುಸ್ತಕ ಓದಿ. ಓದಿದ್ದು ಏನು ನಿಮ್ಮ ಚಿತ್ತದಲ್ಲಿ ಉಳಿಯುತ್ತದೋ ಅದನ್ನೊಮ್ಮೆ ಬರೆಯಿರಿ. ಕಂಠಪಾಠ ಬೇಡವೇಬೇಡ. ಓದು ತಪಸ್ಸಿದಂತೆ. ಒಂದು ಬಾರಿ ನಿಮ್ಮ ಪುಸ್ತಕ ತೆಗೆದು ಪೇಪರ್ ಓದಿದ ಹಾಗೆ ಮುಖ್ಯ ವಿಚಾರ ಮಾತ್ರ ಓದಿಕೊಳ್ಳಿ. ಆಮೇಲೆ ಪುಸ್ತಕದಲ್ಲಿ ತಲ್ಲೀನರಾಗಿ ಓದಬೇಕು ಎಂದು ಕಿವಿ ಮಾತು ಹೇಳಿದರು.

ಕುಂದಾಪುರ ತಾಪಂ ಕಾರ್ಯನಿರ್ವಹಣಾಧಿಕಾರಿ ಮಹೇಶ್ ಕುಮಾರ್ ಹೊಳ್ಳ ಮಾತನಾಡಿ ಎಸೆಸೆಲ್ಸಿ ವಿದ್ಯಾರ್ಥಿಗಳ ಮುಂದಿನ ಭವಿಷ್ಯ ನಿರ್ಧರಿಸುವ ಪ್ರಮುಖ ಘಟ್ಟವಾಗಿದೆ. ಗುರಿ ಮತ್ತು ಮುಂದೆ ಹೀಗೆ ಆಗಬೇಕು ಎನ್ನುವ ನಿರ್ಧಾರ ಮಾಡದಿದ್ದರೆ, ಬದುಕು ಗುರಿ ತಪ್ಪಿದ ನಾವೆಯಂತಾಗುತ್ತದೆ.  ಮುಂದಿನ ಭವಿಷ್ಯದ ಬಗ್ಗೆ ಇಂದೇ ನಿರ್ಧಾರಕ್ಕೆ ಬನ್ನಿ. ಈವಾಗಲೇ ಮುಂದಿನ ಗುರಿ ಏನು ಎನ್ನುವುದರ ನಿರ್ಧರಿಸಿಕೊಳ್ಳದಿದ್ದರೆ ಜೀವನ ಹಾದಿ ತಪ್ಪಲಿದೆ ಎಂದರು.

ತಲ್ಲೂರು ಪ್ರೌಢಶಾಲಾ ಇಂಗ್ಲೀಷ್ ಶಿಕ್ಷಕ ಪ್ರಕಾಶ್ ಮಾಹಿತಿ ನೀಡಿದರು.

ಕುಂದಾಪುರ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರ ಆರ್. ವರ್ಣೇರ್ಕ ಸ್ವಾಗತಿಸಿದರು. ಬೈಂದೂರು ವಾಲ್ಮಿಕಿ ಆಶ್ರಮ ಶಾಲೆ ಮುಖ್ಯ ಶಿಕ್ಷಕ ರಾಜೇಶ್ ನಿರೂಪಿಸಿದರು. ಸಮಾಜ ಕಲ್ಯಾಣ ಇಲಾಖೆ ಮೆನೇಜರ್ ರಮೇಶ್ ಕುಲಾಲ್ ವಂದಿಸಿದರು.

Similar News