×
Ad

ಮೂತ್ರ ವಿಸರ್ಜನೆ ಪ್ರಕರಣ: ಕ್ಷಮೆ ಕೋರಿದ ಏರ್ ಇಂಡಿಯಾ ಸಿಇಒ

Update: 2023-01-07 21:05 IST

ಹೊಸದಿಲ್ಲಿ, ಜ. 7: ನ್ಯೂಯಾರ್ಕ್ ನಿಂದ ಆಗಮಿಸುತ್ತಿದ್ದ ವಿಮಾನದಲ್ಲಿ ಪ್ರಯಾಣಿಕನೋರ್ವ ಮಹಿಳಾ ಪ್ರಯಾಣಿಕರೋರ್ವರ ಮೇಲೆ ಮೂತ್ರ ವಿಸರ್ಜನೆ ಮಾಡಿರುವ ಘಟನೆ ಕುರಿತು ಟಾಟಾ ಸಮೂಹ ಮಾಲಕತ್ವದ ಏರ್ ಇಂಡಿಯಾದ ಸಿಇಒ ಕ್ಯಾಂಪ್ವೆಲ್ ವಿಲ್ಸನ್ ಶನಿವಾರ ಕ್ಷಮೆ ಕೋರಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಕ್ಯಾಬಿನ್ ಸಿಬ್ಬಂದಿ ಹಾಗೂ ಓರ್ವ ಪೈಲಟ್ ಗೆ ಕರ್ತವ್ಯ ನಿರ್ವಹಿಸದಂತೆ ತಡೆ ನೀಡಲಾಗಿದೆ.

ವಿಮಾನದಲ್ಲಿ ಮದ್ಯ ಪೂರೈಸುವ ನೀತಿಯ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ. ವಿಮಾನ ಯಾನ ಸಂಸ್ಥೆಯು ಈ ಸಮಸ್ಯೆಯನ್ನು ಉತ್ತಮವಾಗಿ ನಿರ್ವಹಿಸಬಹುದಿತ್ತು ಎಂದು ವಿಲ್ಸನ್ ತಿಳಿಸಿದ್ದಾರೆ. ಅನುಚಿತ ನಡವಳಿಕೆಯ ಕುರಿತು ದೃಢವಾಗಿ ವರದಿ ಮಾಡುವ ಹಾಗೂ ಅಂತಹ ಘಟನೆಗಳನ್ನು ವರದಿ ಮಾಡುವ ವ್ಯವಸ್ಥೆ ಬಗ್ಗೆ ಅವರು ಭರವಸೆ ನೀಡಿದರು.

‘‘ನಮ್ಮ ವಿಮಾನದಲ್ಲಿ ಸಹ ಪ್ರಯಾಣಿಕರ ಖಂಡನಾರ್ಹ ಕೃತ್ಯದಿಂದ ತೊಂದರೆಗೊಳಗಾದ ಪ್ರಯಾಣಿಕರ ಕುರಿತು ಏರ್ ಇಂಡಿಯಾ ತೀವ್ರ ಕಳವಳ ವ್ಯಕ್ತಪಡಿಸುತ್ತದೆ. ಅವರ ಈ ಅನುಭವಗಳ ಕುರಿತು ನಮಗೆ ವಿಷಾದವಿದೆ, ನೋವಿದೆ’’ ಎಂದು ಅವರು ಹೇಳಿದ್ದಾರೆ.

Similar News