ಕುಂದಾಪುರ: ವಿದ್ಯಾರ್ಥಿಗಳಿಂದ ವಿವಿಧ ಮಾದರಿಗಳ ಪ್ರದರ್ಶನ
Update: 2023-01-07 21:05 IST
ಕುಂದಾಪುರ: ಸ್ಥಳೀಯ ಸಂತ ಜೋಸೆಫರ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳು ತಯಾರಿಸಿದ ವಿಜ್ಞಾನ, ಗಣಿತ, ಸಮಾಜ ಹಾಗೂ ಕರಕುಶಲ ವಿಷಯಕ್ಕೆ ಸಂಬಂಧಿಸಿದ ವಿವಿಧ ಮಾದರಿಗಳ ಪ್ರದರ್ಶನ ಶಾಲೆಯಲ್ಲಿ ಇತ್ತೀಚೆಗೆ ನಡೆಯಿತು.
ಸಮಾಜ ವಿಜ್ಞಾನ ಶಿಕ್ಷಕ ಅಶೋಕ್ ದೇವಾಡಿಗ ಉದ್ಘಾಟಿಸಿ, ವಿದ್ಯಾರ್ಥಿಗಳ ಸುಪ್ತ ಪ್ರತಿಭೆಗಳನ್ನು ಹೊರತರಲು ಸೂಕ್ತವಾದ ವೇದಿಕೆ ಹಾಗೂ ವಿದ್ಯಾರ್ಥಿಗಳಲ್ಲಿ ಬೌದ್ಧಿಕ ವಿಕಸನ ವೃದ್ಧಿಯಾಗುವುದು ಎಂದರು.
ಪ್ರೌಢಶಾಲಾ ಮುಖ್ಯೋಪಾಧ್ಯಾಯನಿ ಸಿಸ್ಟರ್ ಐವಿ, ಶಾಲೆ ಶಿಕ್ಷಕರಾದ ಮೈಕಲ್, ಶಿಕ್ಷಕಿಯರಾದ ಶೀಲತಾ, ಸರಸ್ವತಿ, ಸೆಲಿನ್, ಸ್ವಾತಿ ಇದ್ದರು.