×
Ad

ಕಾರ್ಕಳ: ವಂಚಿಸಿ ವ್ಯಕ್ತಿಯ ಚಿನ್ನಾಭರಣ ಲೂಟಿ

Update: 2023-01-07 21:15 IST

ಕಾರ್ಕಳ: ಬೆಂಗಳೂರಿನಲ್ಲಿ ಬೇಕರಿ ವ್ಯವಹಾರ ಮಾಡಿಕೊಂಡಿದ್ದ ಕಾರ್ಕಳ ರೆಂಜಾಳದ ಸುಧಾಕರ ಶೆಟ್ಟಿ ಎಂಬವರು ಊರಿಗೆ ಬಂದು ವಾಪಾಸ್ ಬೆಂಗಳೂರಿಗೆ ತೆರಳುತ್ತಿದ್ದಾಗ ಬಸ್ ನಿಲ್ದಾಣಕ್ಕೆ ಬಿಡುವುದಾಗಿ ನಂಬಿಸಿ ಅವರ ಚಿನ್ನಾಭರಣ ಲಪಟಾಯಿಸಿದ ಘಟನೆ ವರದಿಯಾಗಿದೆ.

ಪೂಜಾ ಕಾರ್ಯಕ್ರಮದ ಹಿನ್ನೆಲೆ ಬೆಂಗಳೂರಿನಲ್ಲಿ ಬೇಕರಿ ವ್ಯವಹಾರ  ಮಾಡಿಕೊಂಡಿದ್ದ ಸುಧಾಕರ್ ಶೆಟ್ಟಿ ಜ.4ರಂದು ಊರಿಗೆ ಬಂದಿದ್ದು ಜ.5ರ ರಾತ್ರಿ ವಾಪಾಸು ಬೆಂಗಳೂರಿಗೆ ತೆರಳಲು ರೆಂಜಾಳದ ಮನೆಯಿಂದ  ಹೊರಟು ಖಾಸಗಿ ಬಸ್ ಕಛೇರಿಗೆ ಬಂದಿದ್ದರು. ಬಸ್ಸು ಬರಲು ಸಮಯವಿದ್ದ ಕಾರಣ ಅಲ್ಲೇ ಪಕ್ಕದ ಹೊಟೇಲಿಗೆ ಊಟಕ್ಕೆ ತೆರಳಿದ್ದರು. 

9:45ರ  ಸುಮಾರಿಗೆ ಖಾಸಗಿ ಬಸ್ ಕಛೇರಿಗೆ ಹೋಗುವ ಬದಲು ಕಾರ್ಕಳ ಬಸ್‌ಸ್ಟಾಂಡ್ ಕಡೆಗೆ ನಡೆದು ಕೊಂಡು ಹೋಗುತ್ತಿರುವಾಗ ಇಬ್ಬರು ಅಪರಿಚಿತ ವ್ಯಕ್ತಿಗಳು  ಇವರ ಬಳಿ ಬಂದು ಎಲ್ಲಿಗೆ  ಹೋಗುತ್ತೀರಿ ಎಂದು ವಿಚಾರಿಸಿ ಬಸ್‌ನಿಲ್ದಾಣಕ್ಕೆ ಬಿಡುವುದಾಗಿ ನಂಬಿಸಿ ಬೇರೆ  ಯಾರಾದರು ನೋಡಿದರೆ ನಿಮ್ಮ ಚಿನ್ನ, ಹಣವನ್ನು ತೆಗೆದುಕೊಳ್ಳುತ್ತಾರೆ. ಅದನ್ನು ಜಾಗ್ರತೆಯಾಗಿ ಚೀಲದಲ್ಲಿ ಇಟ್ಟುಕೊಳ್ಳಿ ಎಂದು ತಿಳಿಸಿದ್ದಾರೆ. ಸ್ವಲ್ಪ ಸಮಯದ ಬಳಿಕ ಮದ್ಯದ ನಶೆ ಇಳಿದ ಮೇಲೆ ನೋಡಿದಾಗ ಕುತ್ತಿಗೆಯಲ್ಲಿದ್ದ 40 ಗ್ರಾಂ ತೂಕದ ಚಿನ್ನದ  ಚೈನ್, ಒಂದು ಉಂಗುರ ಮತ್ತು ನವರತ್ನ ಉಂಗುರ ಮತ್ತು ಕಿಸೆಯಲ್ಲಿದ್ದ   1500 ನಗದು ಹಣ ಸಹಿತ, ಮೊಬೈಲ್ ನಾಪತ್ತೆಯಾಗಿತ್ತು. ವಂಚಕರು ಲಪಟಾಯಿಸಿದ ನಗದು ಹಣ ಮತ್ತು ವಸ್ತುಗಳ ಒಟ್ಟು ಮೌಲ್ಯ 1,52,500 ರೂ. ಎಂದು ಅಂದಾಜಿಸಲಾಗಿದೆ. 

ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News