ಉಡುಪಿ: ಆಯುರ್ವೇದ ಅಂಗಡಿಯಲ್ಲಿ ಕಳವು
Update: 2023-01-07 21:20 IST
ಉಡುಪಿ: ಉಡುಪಿ ಕೆ.ಎಂ ಮಾರ್ಗದಲ್ಲಿರುವ ಆಯುರ್ವೇದ ಅಂಗಡಿಯೊಂದರಲ್ಲಿ ಕಳ್ಳತನ ನಡೆದ ಬಗ್ಗೆ ದೂರು ದಾಖಲಾಗಿದೆ.
ಅಯುರ್ವೇದ ವೈದ್ಯ ಡಾ.ಚಂದ್ರಶೇಖರ ರಾವ್ ಹೆಚ್. ಎನ್ನುವರು ಉಡುಪಿ ಆಯುರ್ವೇದ ಸ್ಟೋರ್ಸ್‌ನ್ನು ಹೊಂದಿದ್ದು, ಕಳ್ಳರು ಅಂಗಡಿಯ ಶೆಟರ್ ಎಳೆದು ಒಳಪ್ರವೇಶಿಸಿ, ಕ್ಯಾಶ್ ಕೌಂಟರ್‌ನ ಬೀಗ ಮುರಿದು ಅದರಲ್ಲಿದ್ದ 7,300 ರೂ. ನಗದು, 9,000 ಮೌಲ್ಯದ 5 ರೂ. ನಾಣ್ಯಗಳು, ಮೊಬೈಲ್ ಹಾಗೂ ಕೆಲವು ಡ್ರೈಪ್ರೂಟ್ಸ್ ಪ್ಯಾಕೇಟ್ ಗಳನ್ನು ಕಳವು ಮಾಡಿದ್ದು ಜ.7 ಬೆಳಿಗ್ಗೆ ಪ್ರಕರಣ ಬೆಳಕಿಗೆ ಬಂದಿದೆ.
ಕಳವಾದ ಸ್ವತ್ತುಗಳ ಒಟ್ಟು ಮೌಲ್ಯ 20 ಸಾವಿರ ರೂ. ಆಗಿದೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.