ಎಂಟನೇ ತರಗತಿ ವಿದ್ಯಾರ್ಥಿನಿಗೆ 'ಪ್ರೇಮ ಪತ್ರ' ಬರೆದ ಶಿಕ್ಷಕನ ವಿರುದ್ಧ FIR ದಾಖಲು

Update: 2023-01-08 07:05 GMT

ಕನೌಜ್: ಎಂಟನೆ ತರಗತಿಯ ವಿದ್ಯಾರ್ಥಿನಿಗೆ 'ಪ್ರೇಮ ಪತ್ರ' ('love letter') ಬರೆದ ಬಲ್ಲಾರ್‌ಪುರ್‌ನ (Ballarpur) ಸಂಯುಕ್ತ ಶಾಲೆಯ ಶಿಕ್ಷಕನನ್ನು (teacher) ಅಮಾನತುಗೊಳಿಸಲಾಗಿದ್ದು, ಆತನ ವಿರುದ್ಧ ಪ್ರಾಥಮಿಕ ವರದಿ ದಾಖಲಿಸಿಕೊಳ್ಳಲಾಗಿದೆ ಎಂದು ಶನಿವಾರ ಪೊಲೀಸರು ತಿಳಿಸಿದ್ದಾರೆ.

ವಿದ್ಯಾರ್ಥಿನಿಯ ತಂದೆಯ ದೂರನ್ನು ಆಧರಿಸಿ, ಶಿಕ್ಷಕ ಹರಿ ಓಂ ಸಿಂಗ್ ವಿರುದ್ಧ ಶುಕ್ರವಾರ FIR ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಕುನ್ವರ್ ಅನುಪಮ್ ಸಿಂಗ್ ಹೇಳಿದ್ದಾರೆ.

ಡಿಸೆಂಬರ್ 30ರಂದು ಶಿಕ್ಷಕ ಹರಿ ಓಂ ಸಿಂಗ್ ವಿದ್ಯಾರ್ಥಿನಿಗೆ ಗ್ರೀಟಿಂಗ್ ಕಾರ್ಡ್ ನೀಡಿದ್ದ ಎಂದು ಆರೋಪಿಸಲಾಗಿದೆ. ವಿದ್ಯಾರ್ಥಿನಿಯು ಮನೆಗೆ ತಲುಪಿ ಅದನ್ನು ಓದಿದಾಗ, ಆರೋಪಿ ಶಿಕ್ಷಕ ತನ್ನ ಕೈಬರಹದಲ್ಲಿ ಹನ್ನೆರಡು ಸಾಲಿನ ವಾಕ್ಯಗಳನ್ನು ರಚಿಸಿ, ಪ್ರೇಮ ನಿವೇದನೆ ಮಾಡಿಕೊಂಡಿರುವುದು ಕಂಡು ಬಂದಿದೆ.

ಈ ವಿಷಯ ಬೆಳಕಿಗೆ ಬರುತ್ತಿದ್ದಂತೆಯೇ ಜಿಲ್ಲಾ ಪ್ರಾಥಮಿಕ ಶಿಕ್ಷಣಾಧಿಕಾರಿ ಕೌಸ್ತುಭ್ ಸಿಂಗ್, ಆರೋಪಿ ಶಿಕ್ಷಕನನ್ನು ಅಮಾನತುಗೊಳಿಸಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಈ ಕುರಿತು ತನಿಖೆ ನಡೆಸುವಂತೆ ವಲಯ ಶಿಕ್ಷಣಾಧಿಕಾರಿ ವಿಪಿನ್ ಕುಮಾರ್‌ಗೆ ಸೂಚಿಸಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಹೊಸದಿಲ್ಲಿ: ಮೂವರು ಆರೋಪಿಗಳನ್ನು ಜೈಲು ಕಂಬಿ ಒಡೆದು ಬಿಡಿಸಿಕೊಂಡು ಪರಾರಿಯಾದ ದಕ್ಷಿಣ ಆಫ್ರಿಕಾ ಪ್ರಜೆಗಳು

Similar News