×
Ad

ರಾಜೌರಿಯಲ್ಲಿ ಉಗ್ರರ ದಾಳಿ: ಮೃತಪಟ್ಟವರ ಸಂಖ್ಯೆ 7ಕ್ಕೇರಿಕೆ

Update: 2023-01-08 14:54 IST

ಜಮ್ಮು: ಜಮ್ಮು-ಕಾಶ್ಮೀರದ ರಾಜೌರಿಯ ಧಂಗ್ರಿ ಗ್ರಾಮದ ಮೇಲೆ ನಡೆದ ಭಯೋತ್ಪಾದಕರ ದಾಳಿಯಲ್ಲಿ ಗಾಯಗೊಂಡಿದ್ದ ಮತ್ತೊಬ್ಬ ನಾಗರಿಕ ಆಸ್ಪತ್ರೆಯಲ್ಲಿ ರವಿವಾರ ಸಾವನ್ನಪ್ಪಿದ್ದು, ಈ ಮೂಲಕ ಘಟನೆಯಲ್ಲಿ ಸಾವನ್ನಪ್ಪಿರುವವರ ಸಂಖ್ಯೆ 7 ಕ್ಕೆ ಏರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜನವರಿ 1 ರಂದು ತಮ್ಮ ಗ್ರಾಮದಲ್ಲಿ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡ ನಂತರ 20ರ ವಯಸ್ಸಿನ ಪ್ರಿನ್ಸ್ ಶರ್ಮಾ ಅವರು ಜಮ್ಮುವಿನ ಸರಕಾರಿ ವೈದ್ಯಕೀಯ ಕಾಲೇಜು (ಜಿಎಂಸಿ) ಆಸ್ಪತ್ರೆಯಲ್ಲಿ ನಿಧನರಾದರು.  ಅಲ್ಲಿ ಅವರನ್ನು ವಿಶೇಷ ಚಿಕಿತ್ಸೆಗಾಗಿ ಸ್ಥಳಾಂತರಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದರು.

ಧಂಗ್ರಿ ಮೇಲಿನ ದಾಳಿಯಲ್ಲಿ ಶರ್ಮಾ ಅವರ ಹಿರಿಯ ಸಹೋದರ ದೀಪಕ್ ಕುಮಾರ್ ಸೇರಿದಂತೆ ಆರು ಜನರು ಸಾವನ್ನಪ್ಪಿದ್ದರು. ಜನವರಿ 1 ರಂದು ನಡೆದ ಭಯೋತ್ಪಾದಕರ ಗುಂಡಿನ ದಾಳಿಯಲ್ಲಿ ನಾಲ್ವರು ಸಾವನ್ನಪ್ಪಿದರು ಹಾಗೂ  ಆರು ಮಂದಿ ಗಾಯಗೊಂಡರೆ, ಮರುದಿನ ಬೆಳಿಗ್ಗೆ ಗ್ರಾಮದಲ್ಲಿ ಪ್ರಬಲವಾದ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಸ್ಫೋಟವಾಗಿ ಇಬ್ಬರು ಸಾವನ್ನಪ್ಪಿದರು ಹಾಗೂ ಒಂಬತ್ತು ಮಂದಿ ಗಾಯಗೊಂಡಿದ್ದರು. ಪಲಾಯನ ಮಾಡುವ ಮುನ್ನ ಗ್ರಾಮದಲ್ಲಿ ಉಗ್ರರು ಐಇಡಿ  ಇಟ್ಟಿದ್ದರು.

Similar News