×
Ad

ಮಣಿಪಾಲ: ಎರಡು ಪ್ರತ್ಯೇಕ ಗಾಂಜಾ ಸೇವನೆ ಪ್ರಕರಣ; ಇಬ್ಬರು ವಶಕ್ಕೆ

Update: 2023-01-08 21:33 IST

ಮಣಿಪಾಲ: ಗಾಂಜಾ ಸೇವನೆಯ ಎರಡು ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ಯುವಕರನ್ನು ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ವಿದ್ಯಾರತ್ನ ನಗರದ ಪಬ್‌ವೊಂದರ ಬಳಿ ಮಣಿಪಾಲ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರಕರಣವೊಂದರಲ್ಲಿ ಉಡುಪಿಯ ಚಿಟ್ಪಾಡಿಯ ಫರೇಶ್(20) ಹಾಗೂ ಮತ್ತೊಂದು ಪ್ರಕರಣದಲ್ಲಿ  ಉಡುಪಿ ಒಳಕಾಡುವಿನ ಪ್ರತೀಕ್ (22) ಎನ್ನುವರನ್ನು ವಶಕ್ಕೆ ಪಡೆದು ಗಾಂಜಾ ಸೇವನೆ ಶಂಕೆ ಹಿನ್ನೆಲೆಯಲ್ಲಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿದ್ದು, ವೈದ್ಯಕೀಯ ವರದಿಯಲ್ಲಿ ಗಾಂಜಾ ಸೇವನೆ ದೃಢವಾಗಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ  ಮಣಿಪಾಲ ಠಾಣೆಯಲ್ಲಿ ಪ್ರತ್ಯೇಕ ಎರಡು ಪ್ರಕರಣ ದಾಖಲಾಗಿದೆ.

Similar News