ಜಮ್ಮು-ಕಾಶ್ಮೀರದ ಪೂಂಛ್ ನಲ್ಲಿ ಇಬ್ಬರು ಭಯೋತ್ಪಾದಕರ ಹತ್ಯೆ
Update: 2023-01-08 22:17 IST
ಜಮ್ಮು, ಜ.8: ಜಮ್ಮು-ಕಾಶ್ಮೀರದ ಪೂಂಛ್ ಜಿಲ್ಲೆಯ ನಿಯಂತ್ರಣ ರೇಖೆ (ಎಲ್ಎಸಿ)ಯಲ್ಲಿ ನುಸುಳುವಿಕೆ ಪ್ರಯತ್ನವನ್ನು ವಿಫಲಗೊಳಿಸಿರುವ ಸೇನಾಪಡೆಗಳು ಇಬ್ಬರು ಶಸ್ತ್ರಸಜ್ಜಿತ ಭಯೋತ್ಪಾದಕರನ್ನು ಹೊಡೆದುರುಳಿಸಿವೆ ಎಂದು ರಕ್ಷಣಾ ವಕ್ತಾರರು ರವಿವಾರ ತಿಳಿಸಿದರು.
ಶನಿವಾರ ಸಂಜೆ ಬಾಲಾಕೋಟ್ ವಿಭಾಗದಲ್ಲಿ ಗಡಿ ಬೇಲಿಯ ಬಳಿ ಕರ್ತವ್ಯ ನಿರತರಾಗಿದ್ದ ಯೋಧರು ಶಂಕಾಸ್ಪದ ಚಲನವಲನಗಳನ್ನು ಗಮನಿಸಿ ಗುಂಡು ಹಾರಿಸಿದಾಗ ಇಬ್ಬರು ಭಯೋತ್ಪಾದಕರು ಕೊಲ್ಲಲ್ಪಟ್ಟಿದ್ದಾರೆ. ರವಿವಾರ ಬೆಳಿಗ್ಗೆ ಶೋಧ ಕಾರ್ಯಾಚರಣೆ ಸಂದರ್ಭ ಹತ ಭಯೋತ್ಪಾದರ ಶವಗಳು ಪತ್ತೆಯಾಗಿವೆ,ಅವರ ಬಳಿಯಿದ್ದ ಎರಡು ಎಕೆ ಅಸಾಲ್ಟ್ ರೈಫಲ್ಗಳು,ಶಕ್ತಿಶಾಲಿ ಸುಧಾರಿತ ಸ್ಫೋಟಕ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಕ್ತಾರರು ತಿಳಿಸಿದರು.