ಕಲ್ಲಿದ್ದಲು ನಿಕ್ಷೇಪ ಹರಾಜು; ಅದಾನಿ ಎಂಟರ್ಪ್ರೈಸಸ್ ಕುರಿತು ತನಿಖೆ ನಡೆಸಲು ಸಿಐಐಗೆ ನ್ಯಾಯಾಲಯ ಆದೇಶ

Update: 2023-01-08 17:03 GMT

ಡೆಹ್ರಾಡೂನ್, ಜ. 9: ಅರ್ಹತಾ ಮಾನದಂಡಗಳನ್ನು ಪೊರೈಸದ ಹೊರತಾಗಿಯೂ ಜಾರ್ಖಂಡ್ನ ಝರಿಯಾದಲ್ಲಿರುವ ಕಲ್ಲಿದ್ದಲು ನಿಕ್ಷೇಪದ ಹರಾಜಿನಲ್ಲಿ ಅದಾನಿ ಎಂಟರ್ಪ್ರೈಸಸ್ ಹಾಗೂ ಇತರ ಎರಡು ಕಂಪೆನಿಗಳಿಗೆ ಪಾಲ್ಗೊಳ್ಳಲು ಯಾಕೆ ಅವಕಾಶ ನೀಡಲಾಯಿತು ಎಂಬ ಕುರಿತು ತನಿಖೆ ನಡೆಸುವಂತೆ ದಿಲ್ಲಿಯ ವಿಶೇಷ ನ್ಯಾಯಾಲಯ ಸಿಬಿಐಗೆ ಆದೇಶಿಸಿದೆ.

ಕಲ್ಲಿದ್ದಲು ನಿಕ್ಷೇಪಕ್ಕೆ 2012ರಲ್ಲಿ ಹರಾಜ ನಡೆದಿತ್ತು. ಅದಾನಿ ಎಂಟರ್ಪ್ರೈಸಸ್ ಅಲ್ಲದೆ ಎಎಂಆರ್ ಇಂಡಿಯಾ ಹಾಗೂ ಲಾಂಕೋ ಇನ್ಪ್ರಾಸ್ಟ್ರಕ್ಟರ್ ತಮ್ಮ ಬಿಡ್ಗಳನ್ನು ಸಲ್ಲಿಸಿದ್ದವು. ಆದರೆ, ಹರಾಜಿನಲ್ಲಿ ಲ್ಯೊಂಕೊ ಇನ್ಫ್ರಾಟೆಕ್ಗೆ ನೀಡಲಾಗಿತ್ತು. ವಿಶೇಷ ನ್ಯಾಯಾಧೀಶ ಅರುಣ್ ಭಾರದ್ವಾಜ್ ಅವರು ಬುಧವಾರ ನೀಡಿದ ಆದೇಶದಲ್ಲಿ, ಎಪ್ರಿಲ್ 5ರ ಒಳಗೆ ವರದಿ ಸಲ್ಲಿಸುವಂತೆ ಸಿಬಿಐಗೆ ನಿರ್ದೇಶಿಸಿದ್ದಾರೆ ಹಾಗೂ ವಿಚಾರಣೆಯನ್ನು ಅದೇ ದಿನಕ್ಕೆ ಮುಂದೂಡಿದ್ದಾರೆ.

Similar News