×
Ad

ರಾಜ್ಯ ಸರಕಾರ ಸಿದ್ಧಪಡಿಸಿದ ಭಾಷಣವನ್ನು ಓದದೆ ವಿಧಾನಸಭೆಯಿಂದ ಹೊರ ನಡೆದ ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ

Update: 2023-01-09 15:15 IST

ಚೆನ್ನೈ:  ತಮಿಳುನಾಡಿನಲ್ಲಿ ಸರಕಾರ ಮತ್ತು ರಾಜ್ಯಪಾಲ ನಡುವಿನ ಮುಸುಕಿನ ಗುದ್ದಾಟವು ತಾರಕಕ್ಕೇರಿದ್ದು, ವಿಧಾನಸಭಾ ಅಧಿವೇಶನದ ಮೊದಲ ದಿನವಾದ ಇಂದು ರಾಜ್ಯಪಾಲ ಆರ್ ಎನ್ ರವಿ ಭಾಷಣದ ನಂತರ ಗದ್ದಲ, ಕೋಲಾಹಲ ಉಂಟಾಗಿದೆ. ನಂತರ ರಾಜ್ಯಪಾಲ ರವಿ ಸರಕಾರದ ನಿರ್ಣಯದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಕಲಾಪದಿಂದ ಹೊರನಡೆದ ಘಟನೆ ನಡೆದಿದೆ. 

ರಾಜ್ಯ ಸರಕಾರ ಸಿದ್ಧಪಡಿಸಿದ ಭಾಷಣವನ್ನು ಮಾತ್ರ ಸ್ಪೀಕರ್ ತೆಗೆದುಕೊಳ್ಳಬೇಕು. ರಾಜ್ಯಪಾಲರು ಸೇರಿಸಿದ ಅಥವಾ ಬಿಟ್ಟುಬಿಟ್ಟ ಭಾಗಗಳನ್ನು ತೆಗೆದುಹಾಕಬೇಕು ಎಂಬ ನಿರ್ಣಯವನ್ನು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮಂಡಿಸಿದರು. ಈ ಹಿನ್ನೆಲೆಯಲ್ಲಿ ತಮಿಳುನಾಡು ರಾಜ್ಯಪಾಲ ಆರ್. ಎನ್. ರವಿ ಅವರು ವಿಧಾನಸಭೆಯಿಂದ ಹೊರನಡೆದರು,

ರಾಜ್ಯಪಾಲರ ಮೂಲ ಭಾಷಣವನ್ನು ಮಾತ್ರ ರೆಕಾರ್ಡ್ ಮಾಡುವ ನಿರ್ಣಯವನ್ನು ವಿಧಾನಸಭೆ ಅಂಗೀಕರಿಸಿತು.  ಅದನ್ನು ರಾಜ್ಯ ಸರಕಾರ ಸಿದ್ಧಪಡಿಸಿದೆ ಹಾಗೂ  ಸ್ಪೀಕರ್ ಅನುವಾದಿಸಿದ್ದಾರೆ. ಆರ್.ಎನ್.ರವಿ ಅವರು ರಾಷ್ಟ್ರಗೀತೆಗಾಗಿ ಕಾಯದೆ ಹೊರಟು ಹೋದರು.

ಜಾತ್ಯತೀತತೆಯ ಉಲ್ಲೇಖಗಳನ್ನು ಹೊಂದಿರುವ ತಮಿಳುನಾಡು ಶಾಂತಿಯ ಸ್ವರ್ಗ ಎಂದು ಬಣ್ಣಿಸಿರುವ,  ಪೆರಿಯಾರ್, ಬಿ.ಆರ್. ಅಂಬೇಡ್ಕರ್, ಕೆ.  ಕಾಮರಾಜ್, ಸಿ.ಎನ್. ಅಣ್ಣಾದೊರೈ ಹಾಗೂ  ಕರುಣಾನಿಧಿ ಅವರಂತಹ ನಾಯಕರ ಉಲ್ಲೇಖವನ್ನುಹೊಂದಿರುವ ಭಾಷಣವನ್ನು ರಾಜ್ಯಪಾಲರು ಬಿಟ್ಟುಬಿಟ್ಟರು. ಆಡಳಿತಾರೂಢ ಡಿಎಂಕೆ ಪ್ರಚಾರ ಮಾಡುವ ‘ದ್ರಾವಿಡ ಮಾದರಿ’ಯ ಉಲ್ಲೇಖವನ್ನೂ ರಾಜ್ಯಪಾಲರು  ಓದಿಲ್ಲ. ಆ ನಂತರ ಮುಖ್ಯಮಂತ್ರಿ ನಿರ್ಣಯ ಮಂಡಿಸಿದರು

ರಾಜ್ಯಪಾಲರ ಕ್ರಮವು ವಿಧಾನಸಭೆ ಸಂಪ್ರದಾಯಗಳಿಗೆ ವಿರುದ್ಧವಾಗಿದೆ ಎಂದು ನಿರ್ಣಯದಲ್ಲಿ ಎಂಕೆ ಸ್ಟಾಲಿನ್ ಹೇಳಿದ್ದಾರೆ.

ರವಿ ವಿರುದ್ಧ ವಿಧಾನಸಭೆಯಲ್ಲಿ "ತಮಿಳುನಾಡು ತೊಲಗಿ" ಘೋಷಣೆಗಳು ಪ್ರತಿಧ್ವನಿಸಿದವು. ಬಿಜೆಪಿ, ಆರೆಸ್ಸೆಸ್ ಸಿದ್ಧಾಂತವನ್ನು ಹೇರಬೇಡಿ ಎಂದು ಆಡಳಿತಾರೂಢ ಡಿಎಂಕೆ ಶಾಸಕರು ಘೋಷಣೆಗಳನ್ನು ಕೂಗಿದರು.

ಕಾಂಗ್ರೆಸ್ ಸಂಸದ ಕಾರ್ತಿ ಪಿ. ಚಿದಂಬರಂ ಅವರು ರಾಜ್ಯಪಾಲರನ್ನು ಪದಚ್ಯುತಗೊಳಿಸುವಂತೆ ಕರೆ ನೀಡಿದರು.

Similar News