ಹಿಮಾಚಲ ಪ್ರದೇಶ ಕ್ಕಿಂತಲೂ ಚಳಿಮಯವಾದ ದಿಲ್ಲಿ
ಹೊಸದಿಲ್ಲಿ, ಜ. 9: ದಿಲ್ಲಿಯಲ್ಲಿ ಸತತ ಐದನೇ ದಿನವಾದ ಸೋಮವಾರವೂ ತೀವ್ರಶೀತಮಾರುತ ಬೀಸಿದೆ. ದಟ್ಟಮಂಜುವಿನಿಂದಾಗಿ ದೃಗ್ಗೋಚರತೆಯುಕೇವಲ 25 ಮೀಟರ್ಗೆ ಇಳಿದಿದೆ. ಹಾಗಾಗಿ, ರಸ್ತೆ, ರೈಲುಮತ್ತು ವಿಮಾನ ಸಂಚಾರಕ್ಕೆತಡೆಯಾಗಿದೆ.
ಕಳೆದಐದು ದಿನಗಳಿಂದ ದಿಲ್ಲಿಯಲ್ಲಿ ಎಷ್ಟು ತೀವ್ರವಾಗಿಶೀತಮಾರುತ ಬೀಸುತ್ತಿದೆಯೆಂದರೆ, ಅಲ್ಲಿನ ಕನಿಷ್ಠತಾಪಮಾನ ಹಿಮಾಚಲಪ್ರದೇಶಮತ್ತು ಉತ್ತರಾಖಂಡದಹೆಚ್ಚಿನಸ್ಥಳಗಳಿಗಿಂತಲೂಕಡಿಮೆಯಾಗಿದೆ.
ಇಂದಿರಾಗಾಂಧಿ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದ ಪಾಲಮ್ ವೀಕ್ಷಣಾಲಯದಲ್ಲಿ ದೃಗ್ಗೋಚರತೆಯಮಟ್ಟವು 50 ಮೀಟರ್ಗೆಕುಸಿದಿದೆ. ಇದು ಸಫ್ದರ್ಜಂಗ್ ವೀಕ್ಷಣಾಲಯಮತ್ತು ರಿಜ್ ಹವಾಮಾನ ಕೇಂದ್ರದಲ್ಲಿ 25 ಮೀಟರ್ ಆಗಿತ್ತು ಎಂದು ಭಾರತೀಯ ಹವಾಮಾನ ಇಲಾಖೆಯಅಧಿಕಾರಿಯೊಬ್ಬರು ತಿಳಿಸಿದರು.
ಕೆಟ್ಟಹವಾಮಾನದಿಂದಾಗಿಒಟ್ಟು 267 ರೈಲುಗಳುವಿಳಂಬವಾಗಿಓಡುತ್ತಿವೆ. ಐದುವಿಮಾನಗಳನ್ನು ಬೇರೆಸ್ಥಳಗಳಿಗೆ ತಿರುಗಿಸಲಾಗಿದೆಮತ್ತು 30 ವಿಮಾನಗಳ ಹಾರಾಟವನ್ನು ವಿಳಂಬಿಸಲಾಗಿದೆ.
ದಿಲ್ಲಿಯ ಪ್ರಧಾನ ಹವಾಮಾನ ಕೇಂದ್ರವಾಗಿರುವ ಸಫ್ದರ್ಜಂಗ್ ವೀಕ್ಷಣಾಲಯದಲ್ಲಿ 3.8 ಡಿಗ್ರಿಸೆಲ್ಸಿಯಸ್ ಕನಿಷ್ಠಉಷ್ಣತೆ ದಾಖಲಾಗಿದೆ.ಲೋದಿ ರಸ್ತೆ, ಆಯನಗರಮತ್ತು ರಿಜ್ನಲ್ಲಿರುವ ಹವಾಮಾನ ಕೇಂದ್ರಗಳಲ್ಲಿಕ್ರಮವಾಗಿ 3.6 ಡಿಗ್ರಿ, 3.2 ಡಿಗ್ರಿಮತ್ತು 3.3 ಡಿಗ್ರಿಸೆಲ್ಸಿಯಸ್ ಉಷ್ಣತೆ ದಾಖಲಾಗಿದೆ.
ದಿಲ್ಲಿಯಲ್ಲಿ ತೀವ್ರ ಶೀತಮಾರುತ ಬೀಸುತ್ತಿರುವ ಹಿನ್ನೆಲೆಯಲ್ಲಿ, ನಗರದ ಖಾಸಗಿ ಶಾಲೆಗಳ ಚಳಿಗಾಲದ ರಜೆಯನ್ನು ಜನವರಿ 15ರವರೆಗೆ ವಿಸ್ತರಿಸಲಾಗಿದೆ ಎಂದು ದಿಲ್ಲಿ ಸರಕಾರದ ಶಿಕ್ಷಣ ನಿರ್ದೇಶನಾಲಯ ಹೊರಡಿಸಿರುವ ಸುತ್ತೋಲೆಯೊಂದು ತಿಳಿಸಿದೆ.
ಚಳಿಗಾಲದ ರಜೆಯ ಬಳಿಕ, ಖಾಸಗಿ ಶಾಲೆಗಳು ಜನವರಿ 9ರಂದು ಪುನರಾರಂಭಗೊಳ್ಳಬೇಕಾಗಿತ್ತು.
‘‘ಶಿಕ್ಷಣ ನಿರ್ದೇಶನಾಲಯದ ಹಿಂದಿನ ಸುತ್ತೋಲೆಯನ್ನು ಮುಂದುವರಿಸುತ್ತಾ, ದಿಲ್ಲಿಯಲ್ಲಿ ಬೀಸುತ್ತಿರುವಶೀತಮಾರುತದ ಹಿನ್ನೆಲೆಯಲ್ಲಿ ನಗರದ ಎಲ್ಲಾ ಖಾಸಗಿ ಶಾಲೆಗಳುಜನವರಿ 15ರವರೆಗೆ ಮುಚ್ಚಬೇಕೆಂದುಸಲಹೆ ನೀಡಲಾಗಿದೆ’’ ಎಂದುಸುತ್ತೋಲೆ ತಿಳಿಸಿದೆ.