ಮಾ. 15ರೊಳಗೆ ಸೈನಿಕರ ಬಾಕಿ ಪಿಂಚಣಿ ಪಾವತಿಸಿ: ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್ ಸಮಯಾವಕಾಶ
Update: 2023-01-09 22:25 IST
ಹೊಸದಿಲ್ಲಿ, ಜ. 9: ಸಮಾನ ಹುದ್ದೆಗೆ ಸಮಾನ ಪಿಂಚಣಿಯನ್ವಯ, ಸೇನಾ ಪಡೆಗಳಲ್ಲಿ ಸೇವೆಸಲ್ಲಿಸಿರುವ ಎಲ್ಲಾ ಅರ್ಹ ಪಿಂಚಣಿದಾರರ ಬಾಕಿಯನ್ನು ಪಾವತಿಸಲು ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ಸರಕಾರ ಕ್ಕೆಮಾರ್ಚ್ 15ರವರೆಗೆ ಸಮಯಾವಕಾಶ ನೀಡಿದೆ.
ಸೇನಾ ಪಡೆಗಳಲ್ಲಿ ಸೇವೆ ಸಲ್ಲಿಸಿರುವ ಎಲ್ಲಾ ಪಿಂಚಣಿದಾರರ ಬಾಕಿಯನ್ನು ಕ್ಷಿಪ್ರವಾಗಿ ವಿಲೇವಾರಿ ಮಾಡಲು ಹಾಗೂ ಇನ್ನಷ್ಟು ವಿಳಂಬ ಇಲ್ಲದಂತೆ ನೋಡಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಮುಖ್ಯ ನ್ಯಾಯಾಧೀಶ ಡಿ.ವೈ. ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ.ಎಸ್. ನರಸಿಂಹ ಅವರ ನ್ನೊಳಗೊಂಡ ಪೀಠವೊಂದು ಕೇಂದ್ರ ಸರಕಾರ ಕ್ಕೆಸೂಚಿಸಿತು.
ಬಾಕಿ ಪಾವತಿಯ ವಿಚಾರದಲ್ಲಿ ಕೇಂದ್ರ ಸರಕಾರದ ವರ್ತನೆಯಿಂದ ನೊಂದರೆ ನ್ಯಾಯಾಲಯಕ್ಕೆಅರ್ಜಿಸಲ್ಲಿಸಲು ಮಾಜಿ ಸೈನಿಕರ ಸಂಘ ಕ್ಕೆ ಸುಪ್ರೀಂ ಕೋರ್ಟ್ ಸ್ವಾತಂತ್ರ ನೀಡಿತು.