ಕೋಚಿಂಗ್ ವೃತ್ತಿಯಿಂದಲೂ ನಿವೃತ್ತರಾದ ಮಾಜಿ ಯುಎಫ್ ಸಿ ಚಾಂಪಿಯನ್ ಖಬೀಬ್

Update: 2023-02-12 08:11 GMT

ಮಾಸ್ಕೊ: ಯುನೈಟೆಡ್ ಫೈಟಿಂಗ್ ಚಾಂಪಿಯನ್‌ಶಿಪ್ (UFC) ನ ಮಾಜಿ ಚಾಂಪಿಯನ್, ಮಿಶ್ರ ಮಾರ್ಷಲ್ ಆರ್ಟ್ಸ್‌ನ ಪ್ರಮುಖರಲ್ಲಿ ಒಬ್ಬರಾದ  ಖಬೀಬ್ ನೂರ್ ಮೊಹಮದೊವ್ (Khabib Nurmagomedov) ತನ್ನ ಕುಟುಂಬ ಸದಸ್ಯರೊಂದಿಗೆ ಹೆಚ್ಚಿನ ಸಮಯ ಕಳೆಯುವ ಉದ್ದೇಶದಿಂದ ಕೋಚಿಂಗ್ ವೃತ್ತಿಗೆ ವಿದಾಯ ಹೇಳಿದ್ದಾರೆ.

29-0 ದಾಖಲೆಯನ್ನು ಹೊಂದಿರುವ ಖಬೀಬ್ ಅವರು  ಕಾನರ್ ಮೆಕ್‌ಗ್ರೆಗರ್ ಹಾಗೂ ಡಸ್ಟಿನ್ ಪೊರಿಯರ್ ಸೇರಿದಂತೆ ಪ್ರಮುಖರನ್ನು  ಸೋಲಿಸಿದ್ದರು, ಹಠಾತ್ ನಿವೃತ್ತಿ ಪಡೆದ  ಎರಡು ವರ್ಷಗಳ ಬಳಿಕ  ಕಳೆದ ವರ್ಷವಷ್ಟೇ  ಕೋಚಿಂಗ್ ನೀಡಲಾರಂಭಿಸಿದ್ದರು

ಆದರೆ, ಈಗ ಅವರು ಕೋಚಿಂಗ್‌ ವೃತ್ತಿಯಿಂದಲೂ ಹಿಂದೆ ಸರಿದಿದ್ದಾರೆ.

ಖಬೀಬ್ ಎಂಎಂಎ ಉದ್ಯಮ ತೊರೆಯುತ್ತಿದ್ದಾರೆ.  ತರಬೇತಿ ಹಾಗೂ  MMA ಗೆ ಸಂಬಂಧಿಸಿದ ಎಲ್ಲವನ್ನು  ಅವರು ತ್ಯಜಿಸುತ್ತಿದ್ದಾರೆ. ತನ್ನ ಕುಟುಂಬಕ್ಕೆ ಹೆಚ್ಚಿನ ಸಮಯವನ್ನು ವಿನಿಯೋಗಿಸುವ ಖಬೀಬ್‌ ಬಯಕೆಯೇ ಇದಕ್ಕೆ ಕಾರಣ ಎಂದು ಖಬೀಬ್  ರಷ್ಯನ್ ಭಾಷೆಯಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆಂದು ಟಾಕ್‌ಸ್ಪೋರ್ಟ್ ತಿಳಿಸಿದೆ.

ಯುಎಫ್‌ಸಿ 254 ರಲ್ಲಿ ಜಸ್ಟಿನ್ ಗೇತ್ಜೆಯನ್ನು ಸೋಲಿಸಿದ ನಂತರ ಖಬೀಬ್  ಅವರು 2020 ರಲ್ಲಿ ಮಾರ್ಷಲ್ ಆರ್ಟ್ಸ್‌ ನಿಂದ  ನಿವೃತ್ತರಾದರು. ನಂತರ ಅವರು ತಮ್ಮದೇ ಆದ MMA ಪ್ರಚಾರ ಕಂಪನಿಯನ್ನು ಆರಂಭಿಸಿದರು ಹಾಗೂ  ತರಬೇತುದಾರರಾದರು.

Similar News