×
Ad

ಪೊಲೀಸ್ ಸಿಬ್ಬಂದಿಯನ್ನು ಚಾಕುವಿನಿಂದ ಇರಿದು ಕೊಂದ ಮೊಬೈಲ್ ಕಳ್ಳ

ಸಿಬ್ಬಂದಿಯ ರಕ್ಷಣೆಗೆ ಧಾವಿಸದ ಜನರು

Update: 2023-01-11 12:18 IST

ಹೊಸದಿಲ್ಲಿ: ಮೊಬೈಲ್ ಫೋನ್ ಕಳವುಗೈದು ಸಿಕ್ಕಿಬಿದ್ದ ವ್ಯಕ್ತಿಯೊಬ್ಬ ದಿಲ್ಲಿ ಪೊಲೀಸ್ ಸಿಬ್ಬಂದಿಗೆ 12 ಬಾರಿ ಇರಿದು ಕೊಂದಿರುವ ಭಯಾನಕ ಘಟನೆ ನಡೆದಿದೆ. ಜನನಿಬಿಡ ರಸ್ತೆಯಲ್ಲಿಯೇ ಈ ಘಟನೆ ನಡೆದರೂ ಯಾರೊಬ್ಬರೂ ದಾಳಿಕೋರನನ್ನು ತಡೆದು ಪೊಲೀಸ್ ಸಿಬ್ಬಂದಿ ರಕ್ಷಣೆಗೆ ಬಾರದಿರುವುದು ಕ್ಯಾಮರಾ ದೃಶ್ಯದಲ್ಲಿ ಕಂಡುಬಂದಿದೆ.

ಘಟನೆಯಲ್ಲಿ ತೀವ್ರ ಗಾಯಗೊಂಡಿದ್ದ 57 ವರ್ಷದ ಕಾನ್ಸ್‌ಟೇಬಲ್ ಶಂಭು ದಯಾಳ್ ನಾಲ್ಕು ದಿನಗಳ ನಂತರ ರವಿವಾರ ಮೃತಪಟ್ಟರು.

ಜನವರಿ 4 ರ ಭಯಾನಕ ವೀಡಿಯೊದಲ್ಲಿ ಶಂಭು ದಯಾಳ್‌ಗೆ ದುಷ್ಕರ್ಮಿಯು ಪದೇ ಪದೇ ಇರಿದಿರುವುದು ಕಂಡುಬಂದಿದೆ. ಸುತ್ತಮುತ್ತಲಿದ್ದ ಜನರು ಇದನ್ನು ದೂರದಿಂದ ನಿಂತು ನೋಡಿದ್ದಾರೆ.

ಪಶ್ಚಿಮ ದಿಲ್ಲಿಯ ಮಾಯಾಪುರಿಯಲ್ಲಿನ ಕೊಳೆಗೇರಿಯಿಂದ ಸಿಕ್ಕಿಬಿದ್ದಿದ್ದ ಆರೋಪಿ ಅನೀಶ್ ರಾಜ್ ಎಂಬ ಕಳ್ಳನನ್ನು ಹಿಡಿದುಕೊಂಡು ಪೊಲೀಸ್ ಠಾಣೆಗೆ ಹೋಗುತ್ತಿದ್ದಾಗ. ತನ್ನ ಬಟ್ಟೆಯಲ್ಲಿ ಬಚ್ಚಿಟ್ಟಿದ್ದ ಚಾಕು ಹೊರ ತೆಗೆದು ಶಂಭು ದಯಾಳ್ ಅವರ ಕುತ್ತಿಗೆ, ಎದೆ ಮತ್ತು ಹೊಟ್ಟೆಯ ಮೇಲೆ ಇರಿದಿದ್ದಾನೆ.

ಅನೀಶ್ ತನ್ನ ಗಂಡನ ಫೋನ್ ಕದ್ದು ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆಯೊಬ್ಬರು ಪೊಲೀಸರಿಗೆ ದೂರು ನೀಡಿದ್ದರು. ಶಂಭು ದಯಾಳ್ ಸ್ಥಳಕ್ಕಾಮಿಗಮಿಸಿ ಕದ್ದ ಫೋನ್ ವಶಪಡಿಸಿಕೊಂಡು ಕಳ್ಳನನ್ನು ಪೊಲೀಸ್ ಠಾಣೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಈ ಘಟನೆ ನಡೆದಿದೆ.

Similar News