ಎರಡನೇ ರನ್ ನಿರಾಕರಿಸಿದ ಹಾರ್ದಿಕ್ ಪಾಂಡ್ಯರನ್ನು ದಿಟ್ಟಿಸಿ ನೋಡಿದ ಕೊಹ್ಲಿ; ವಿಡಿಯೋ ವೈರಲ್

Update: 2023-01-11 09:04 GMT

ಗುವಾಹಟಿ: ಶ್ರೀಲಂಕಾ ವಿರುದ್ಧ ಮಂಗಳವಾರ ನಡೆದ ಮೂರು ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ (Virat Kohli) ಭಾರತದ ಪರ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಅವರ 45ನೇ ಏಕದಿನ ಅಂತಾರಾಷ್ಟ್ರೀಯ ಶತಕದ ನೆರವಿನಿಂದ  ಭಾರತವು ಶ್ರೀಲಂಕಾ (Sri Lanka) ವಿರುದ್ಧ 67 ರನ್‌ಗಳ ಜಯ ಸಾಧಿಸಿತು.

ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಂಗಳವಾರ ಕೊಹ್ಲಿ 87 ಎಸೆತಗಳಲ್ಲಿ 113 ರನ್ ಗಳಿಸಿ ಮಿಂಚಿದ್ದರು. ಶತಕದ ಹಾದಿಯಲ್ಲಿ  ಸ್ಟಾರ್ ಬ್ಯಾಟರ್ ಕೊಹ್ಲಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ (Hardik Pandya) ವರ್ತನೆಯಿಂದ ಬೇಸರ ವ್ಯಕ್ತಪಡಿಸಿರುವ ಘಟನೆ ನಡೆಯಿತು.

ಭಾರತದ ಇನಿಂಗ್ಸ್‌ನ 43 ನೇ ಓವರ್‌ನಲ್ಲಿ ಈ ಘಟನೆ ನಡೆದಿದೆ. ಕಸುನ್ ರಜಿತಾ  ಬೌಲಿಂಗ್ ನಲ್ಲಿ ಕೊಹ್ಲಿ ತ್ವರಿತ ಸಿಂಗಲ್ ತೆಗೆದುಕೊಂಡ ಬಳಿಕ  ಎರಡನೇ ರನ್ ತೆಗೆದುಕೊಳ್ಳಲು ಧಾವಿಸಿದ್ದರು.  ಪಿಚ್‌ನ  ಅರ್ಧ ದೂರ ತಲುಪಿದ್ದರು. ಆದರೆ  ಇನ್ನೊಂದು ತುದಿಯಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಹಾರ್ದಿಕ್  ಅವರು ಕೊಹ್ಲಿ ಅವರನ್ನು ಹಿಂದಕ್ಕೆ ಕಳುಹಿಸಿದರು. ಈ ಘಟನೆಯ ನಂತರ ಕೊಹ್ಲಿ ಅವರು  ಹಾರ್ದಿಕ್ ರತ್ತ ದಿಟ್ಟಿಸಿ ನೋಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Similar News