ಉಡುಪಿ: ಡಾ.ಟಿಎಂಎಪೈ ಆಸ್ಪತ್ರೆಯಲ್ಲಿ ಜಠರ ರೋಗದ ಶಸ್ತ್ರಚಿಕಿತ್ಸಾ ಸೇವೆ
Update: 2023-01-11 18:55 IST
ಉಡುಪಿ: ನಗರದ ಡಾ.ಟಿಎಂಎ ಪೈ ಆಸ್ಪತ್ರೆಯಲ್ಲಿ ಕ್ಲಿನಿಕಲ್ ಮತ್ತು ಜಠರ ರೋಗಗಳ ಶಸ್ತ್ರಚಿಕಿತ್ಸಾ ಸೇವೆ ಪ್ರಾರಂಭಗೊಂಡಿದ್ದು, ಖ್ಯಾತ ಕನ್ಸಲ್ಟೆಂಟ್ ಸರ್ಜನ್ ಮತ್ತು ಸರ್ಜಿಕಲ್ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ. ರೀತೇಶ್ ಆರ್ ಶೆಟ್ಟಿ ಅವರು ವಾರದ ಎಲ್ಲಾ ದಿನಗಳಲ್ಲಿ ಪೂರ್ಣ ಅವಧಿಗೆ ಸಮಾಲೋಚನೆಗೆ ಲಭ್ಯವಿರುತ್ತಾರೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡ.ಶಶಿಕಿರಣ್ ಉಮಾಕಾಂತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾರ್ವಜನಿಕರು ಈ ಕುರಿತು ಹೆಚ್ಚಿನ ಮಾಹಿತಿಗಳಿಗಾಗಿ ದೂರವಾಣಿ ನಂ. 7259032864ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.