ಲೋಹಿತಾಕ್ಷ ಸುವರ್ಣ ಸ್ಮರಣಾರ್ಥ ಪಿಬಿಸಿ ಟ್ರೋಪಿ: ಓಶಿಯನ್ ವಾರಿಯರ್ಸ್ ಬ್ಯಾಡ್ಮಿಂಟನ್ ಚಾಂಪಿಯನ್

Update: 2023-01-12 15:30 GMT

ಪಡುಬಿದ್ರಿ: ಹಿರಿಯ ಬ್ಯಾಡ್ಮಿಂಟನ್ ಪಟು ಪಡುಹಿತ್ಲು ಲೋಹಿತಾಕ್ಷ ಸುವರ್ಣ ಸ್ಮರಣಾರ್ಥ ಪಡುಬಿದ್ರಿ ಬ್ಯಾಡ್ಮಿಂಟನ್ ಕ್ಲಬ್ ವತಿಯಿಂದ ಹಳೆಯಂಗಡಿಯ ಟಾರ್ಪಡೋಸ್ ಸ್ಪೊಟ್ರ್ಸ್ ಕ್ಲಬ್‍ನ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಿಬಿಸಿ ಟ್ರೋಫಿ-2023 ಪ್ರೀಮಿಯರ್ ಲೀಗ್ ಅನ್ನು ಸಿರಾಜ್ ಮಾಲಕತ್ವದ ಓಶಿಯನ್ ವಾರಿಯರ್ಸ್ ತಂಡವು ಜಯಿಸಿ ಚಾಂಪಿಯನ್ ಆಯಿತು.

ಓಶಿಯನ್ ವಾರಿಯರ್ಸ್ ತಂಡವು ಪಿಬಿಸಿ ಟ್ರೋಪಿ ಸಹಿತ 7,777 ರೂ. ನಗದು ಬಹುಮಾನ ತನ್ನದಾಗಿಸಿಕೊಂಡಿತು. ಫೈನಲ್ ಪಂದ್ಯದಲ್ಲಿ ಪ್ರಬಲ ಹಣಾಹಣಿ ಕೊಟ್ಟ ನವೀನ್ ಎನ್. ಶೆಟ್ಟಿ ಮಾಲಕತ್ವದ ಮೋಹಿತ್ ಸ್ಮಾಷರ್ಸ್ ತಂಡವು ರನ್ನರ್ ಅಪ್ ಆಗಿ ಪಿಬಿಸಿ ಟ್ರೊಫಿ ಸಹಿತ 5,555 ರೂ. ನಗದು ಬಹುಮಾನ ಪಡೆಯಿತು. ಮೋಹಿತ್ ಸ್ಮಾಷರ್ಸ್ ತಂಡದ ಶಾಲ್ಮಾಲ್ `ಬೆಸ್ಟ್ ಎಮಜಿರ್ಂಗ್ ಪ್ಲೇಯರ್' ಹಾಗೂ ಓಶಿಯನ್ ವಾರಿಯರ್ಸ್‍ನ ರಾಹುಲ್ ಬೆಸ್ಟ್ ಆಲ್‍ರೌಂಡರ್ ವೈಯಕ್ತಿಕ ಪ್ರಶಸ್ತಿ ಪಡೆದುಕೊಂಡರು. 

ಪಂದ್ಯಕೂಟದಲ್ಲಿ 8 ತಂಡಗಳಲ್ಲಿ ತಲಾ 8 ಮಂದಿಯಂತೆ ಒಟ್ಟು 64 ಆಟಗಾರರು ಭಾಗವಹಿಸಿದ್ದರು. ರಾಷ್ಟ್ರ, ಅಂತಾರಾಷ್ಟ್ರ ಮಟ್ಟದ ಪಂದ್ಯಾಟಗಳಲ್ಲಿ ಭಾಗವಹಿಸಿದ್ದ ಆಟಗಾರರು ಕೂಡ ಇಲ್ಲಿನ ಪಂದ್ಯಾಟದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಇದೇ ಸಂದರ್ಭದಲ್ಲಿ ತಂಡಗಳ ಮಾಲಕರನ್ನು ಕ್ಲಬ್ ವತಿಯಿಂದ ಸಮ್ಮಾನಿಸಲಾಯಿತು.

ತೀರ್ಥಹಳ್ಳಿಯ ನ್ಯಾಶನಲ್ ಗ್ರೂಪ್ ಆಫ್ ಕಂಪೆನಿಯ ಡಿ.ಎಸ್. ಅಬ್ದುಲ್ ರೆಹಮಾನ್ ಪಂದ್ಯಾಟವನ್ನು ಉದ್ಘಾಟಿಸಿದರು. ಕಾಂಗ್ರೆಸ್ ಮುಖಂಡ ನವೀನ್‍ ಚಂದ್ರ ಜೆ. ಶೆಟ್ಟಿ, ಶಾಶ್ವತ್, ಉದ್ಯಮಿ ವೈ. ಸುಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಪಡುಬಿದ್ರಿ ಸಿ.ಎ. ಬ್ಯಾಂಕ್‍ನ ಅಧ್ಯಕ್ಷ ವೈ. ಸುಧೀರ್ ಕುಮಾರ್ ಬಹುಮಾನ ವಿತರಿಸಿದರು. ಉದ್ಯಮಿ ಸಂತೋಷ್ ಕುಮಾರ್ ಶೆಟ್ಟಿ, ಪಡುಬಿದ್ರಿ ಬ್ಯಾಡ್ಮಿಂಟನ್ ಕ್ಲಬ್‍ನ ಅಧ್ಯಕ್ಷ ವೈ. ಸುಕುಮಾರ್, ಉಡುಪಿ ಜಿಲ್ಲಾ ಟೆನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಶನ್‍ನ ಶರತ್ ಶೆಟ್ಟಿ ಪಡುಬಿದ್ರಿ, ಶಾಶ್ವತ್, ನವೀನ್ ಎನ್. ಶೆಟ್ಟಿ, ಉದ್ಯಮಿ ಅಜಯ್ ಶೆಟ್ಟಿ, ಕಪಿಲ್ ಕುಮಾರ್, ಸುನೀಲ್ ಆರ್.ಎಂ., ಸಂಜಯ್ ಆರ್.ಎಂ., ಮಹಮ್ಮದ್ ಅಶ್ರಫ್, ದೀಕ್ಷಿತ್, ರವಿ ಎರ್ಮಾಳ್, ಸುರೇಶ್ ಆಚಾರ್ಯ, ಅಶ್ರಫ್, ತಾರಾನಾಥ್, ಷರೀಫ್ ಮಿನ್ನಾ ಮತ್ತಿತರರು ಉಪಸ್ಥಿತರಿದ್ದರು.

ಪಡುಬಿದ್ರಿ ಬ್ಯಾಡ್ಮಿಂಟನ್ ಕ್ಲಬ್‍ನ ಕಾರ್ಯದರ್ಶಿ ರಮೀಝ್ ಹುಸೈನ್ ಕಾರ್ಯಕ್ರಮ ನಿರ್ವಹಿಸಿದರು. 

Similar News