ಮಣಿಪಾಲ| ಡ್ರಗ್ಸ್ ಮಾರಾಟಕ್ಕೆ ಯತ್ನ: ಇಬ್ಬರ ಬಂಧನ

Update: 2023-01-17 13:59 GMT

ಮಣಿಪಾಲ: ಅಕ್ರಮವಾಗಿ ಮಾದಕ ದ್ರವ್ಯ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ಉಡುಪಿ ಸೆನ್ ಅಪರಾಧ ಪೊಲೀಸರು ಡಿ.16ರಂದು ಅಜ್ಜರಕಾಡು ಪುರಭವನದ ಸಮೀಪದ ರಿಕ್ಷಾ ನಿಲ್ದಾಣದ ಬಳಿ ಬಂಧಿಸಿದ್ದಾರೆ.

ಹಿರಿಯಡ್ಕ ಬೆಳ್ಳರ್ಪಾಡಿಯ ರಾಘವೇಂದ್ರ ದೇವಾಡಿಗ(41) ಹಾಗೂ 80 ಬಡಗುಬೆಟ್ಟು ಗ್ರಾಮದ ಅಲೆವೂರು ರಸ್ತೆಯ ಜಗದೀಶ್ ಪೂಜಾರಿ(32) ಬಂಧಿತ ಆರೋಪಿ.

ಬಂಧಿತರಿಂದ 1 ಕೆ.ಜಿ 176 ಗ್ರಾಂ ತೂಕದ ಗಾಂಜಾ, 10 ಗ್ರಾಂ ತೂಕದ ಡ್ರಗ್ಸ್, ಆಕ್ಟಿವಾ ಸ್ಕೂಟರ್, 2 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಸೊತ್ತುಗಳ ಒಟ್ಟು ಮೌಲ್ಯ 2,09,000ರೂ. ಅಂದಾಜಿಸಲಾಗಿದೆ. ಈ ಬಗ್ಗೆ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Similar News