ಆರ್‌ಪಿಎಲ್ ಸೀಸನ್ ಕ್ರಿಕೆಟ್ ಪಂದ್ಯಾಟ:ಮಹಾಲಕ್ಷ್ಮೀ ಲಕ್ಷ್ಮೀಪುರ ವಿನ್ನರ್, ಕೆಎಫ್‌ಕೆ ಅಲೆವೂರು ರನ್ನರ್ಸ್‌

Update: 2023-01-17 15:16 GMT

ಉಡುಪಿ: ಉಡುಪಿ ಜಿಲ್ಲಾ ಆರ್‌ಎಸ್‌ಬಿ ಯೂತ್ ಆಶ್ರಯದಲ್ಲಿ ಎರಡು ದಿನಗಳ ಕಾಲ ಮಣಿಪಾಲ ಎಂಜೆಸಿ ಕ್ರೀಡಾಂಗಣದಲ್ಲಿ ಜರುಗಿದ ಆಹ್ವಾನಿತ 8 ಫ್ರಾಂಚೈಸಿಗಳ ನಡುವಿನ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟ ಆರ್‌ಪಿಎಲ್ ಸೀಸನ್-1 ಇದರಲ್ಲಿ ಕಾರ್ಕಳ ಹಿರ್ಗಾನದ ಮಹಾಲಕ್ಷ್ಮೀ ಲಕ್ಷ್ಮೀ ಪುರ ತಂಡ ಆಕರ್ಷಕ ಟ್ರೋಫಿ ಸಹಿತ  60,606ರೂ. ನಗದು ಪುರಸ್ಕಾರವನ್ನು ಗೆದ್ದುಕೊಂಡಿತು.

ರನ್ನರ್ಸ್‌ ಅಲೆವೂರು ತಂಡ ಟ್ರೋಫಿ ಸಹಿತ 40,404ರೂ. ನಗದು ಪುರಸ್ಕಾರವನ್ನು ಪಡೆಯಿತು. ರವಿವಾರ ಜರಗಿದ ಸಮಾರೋಪ ಸಮಾರಂಭದಲ್ಲಿ ಮಣಿಪಾಲ ಆರ್‌ಎಸ್‌ಬಿ ಸಂಘದ ಅಧ್ಯಕ್ಷ ಪೆರ್ಣಂಕಿಲ ಶ್ರೀಶ ನಾಯಕ್, ಶ್ರೀಕ್ಷೇತ್ರ ಲಕ್ಷ್ಮೀಪುರ ಇದರ ಆಡಳಿತ ಮೊಕ್ತೇಸರ ಅಶೋಕ್ ನಾಯಕ್ ಹಿರ್ಗಾನ, ಶ್ರೀಕ್ಷೇತ್ರ ಬಂಟಕಲ್ಲು ಇದರ ಆಡಳಿತ ಮಂಡಳಿ ಅಧ್ಯಕ್ಷ ಜಯರಾಮ ಪ್ರಭು ಗಂಪದಬೈಲು ವಿಜೇತ ತಂಡಗಳಿಗೆ ಬಹುಮಾನ ನೀಡಿದರು.

ಆರ್‌ಎಸ್‌ಬಿ ಮಹಿಳೆಯರಿಗಾಗಿ ಏರ್ಪಡಿಸಿದ ತ್ರೋಬಾಲ್ ಪಂದ್ಯಾಟದಲ್ಲಿ ಬೆಳ್ಮಣ್ ಪುನಾರು ಮಹಿಳಾ ತಂಡ ನರಸಿಂಗೆ ನೃಕೇಸರಿ ತಂಡವನ್ನು ಪರಾಜಯ ಗೊಳಿಸಿ ಟ್ರೋಫಿ ಸಹಿತ ನಗದು ಪುರಸ್ಕಾರ ಗಳಿಸಿತು. ರನ್ನರ್ಸ್‌ ಪ್ರಶಸ್ತಿಯನ್ನು ನರಸಿಂಗೆ ನೃಕೇಸರಿ ತಂಡವು ಟ್ರೋಫಿ ಸಹಿತ ನಗದು ಪುರಸ್ಕಾರ ಪಡೆಯಿತು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.  ಆರ್‌ಎಸ್‌ಬಿ ಮಹಿಳಾ ವೇದಿಕೆ ಅಧ್ಯಕ್ಷೆ ಗೀತಾ ನಾಯಕ್, ಚೇತನ್ ನಾಯಕ್ ಮಣಿಪಾಲ, ಆರ್‌ಎಸ್‌ಬಿ ಸಂಘ ಕಾರ್ಕಳ ಅಧ್ಯಕ್ಷ ಸದಾಶಿವ ಪ್ರಭು, ಆರ್‌ಎಸ್‌ಬಿ ಸಂಘ ಪುನಾರು, ಸೂಡ ಬೆಳ್ಮಣ್ ಅಧ್ಯಕ್ಷ ರಂಜಿತ್‌ಕೆ.ಎಸ್, ಆರ್‌ಎಸ್‌ಬಿ ಸಂಘ ಹಿರಿಯಡ್ಕ ಅಧ್ಯಕ್ಷ ದೇವೇಂದ್ರ ನಾಯಕ್, ಉದ್ಯಮಿಗಳಾದ ಸತೀಶ್ ಮರಾಠೆ, ಹರೀಶ್ ನಾಯಕ್, ವಿವಿಧ ಸಂಘಟನೆಗಳ ಪ್ರಮುಖರು, ಪ್ರಧಾನ ಸಂಘಟಕರಾದ ಪ್ರಮೋದ್, ವಿಶ್ವನಾಥ್, ಪ್ರಸಾದ್ ಉಪಸ್ಥಿತರಿದ್ದರು. ಮರ್ಣೆ ನಾಗೇಂದ್ರ ನಾಯಕ್ ನಿರೂಪಿಸಿ ವಂದಿಸಿದರು.

Similar News