ಆಸ್ಟ್ರೇಲಿಯನ್ ಓಪನ್‌: ಹಾಲಿ ಚಾಂಪಿಯನ್ ರಫೆಲ್ ನಡಾಲ್ ಗೆ ಸೋಲು

Update: 2023-01-18 07:19 GMT

ಮೆಲ್ಬೋರ್ನ್: ಹಾಲಿ ಚಾಂಪಿಯನ್ ರಫೆಲ್ ನಡಾಲ್ Rafael Nadal ಎರಡನೇ ಸುತ್ತಿನಲ್ಲಿ ನೇರ ಸೆಟ್‌ಗಳಿಂದ ಸೋಲುವ ಮೂಲಕ ಆಸ್ಟ್ರೇಲಿಯನ್ ಓಪನ್‌ ಟೆನಿಸ್ ಟೂರ್ನಿಯಿಂದ ನಿರ್ಗಮಿಸಿದ್ದಾರೆ.

 ನಡಾಲ್ ಅವರನ್ನು 6-4, 6-4, 7-5 ಸೆಟ್‌ಗಳಿಂದ ಸೋಲಿಸಿದ ಅಮೆರಿಕದ  ಮೆಕೆಂಝಿ ಮೆಕ್‌ಡೊನಾಲ್ಡ್ ಮೂರನೇ ಸುತ್ತಿಗೆ ಮುನ್ನಡೆದರು.

ಈ ವರ್ಷದ ಮೊದಲ ಗ್ರ್ಯಾನ್  ಸ್ಲಾಮ್‌ನಲ್ಲಿ ನಂ. 1 ಶ್ರೇಯಾಂಕದ ಆಟಗಾರನಾಗಿರುವ ನಡಾಲ್ ವಿರುದ್ಧ ಮೆಕ್‌ಡೊನಾಲ್ಡ್ ತಮ್ಮ ವೃತ್ತಿಜೀವನದ ಅತಿದೊಡ್ಡ ಗೆಲುವು ಸಾಧಿಸಿದರು.

ಗಾಯದ ಸಮಸ್ಯೆಯಿಂದ  ಬಳಲುತ್ತಿರುವ ಸ್ಪ್ಯಾನಿಷ್ 36 ವರ್ಷ ವಯಸ್ಸಿನ ನಡಾಲ್ ಮೊದಲಿನ ಲಯ ಕಂಡುಕೊಳ್ಳಲು ವಿಫಲರಾದರು.

Similar News