ಮಲ್ಪೆ: ಉಡುಪಿ ರಜತ- ಬೀಚ್ ಉತ್ಸವಕ್ಕೆ ತೆರೆ
Update: 2023-01-22 21:05 IST
ಉಡುಪಿ, ಜ.22: ಉಡುಪಿ ಜಿಲ್ಲಾ ರಜತ ಮಹೋತ್ಸವದ ಅಂಗವಾಗಿ ಮಲ್ಪೆ ಬೀಚ್‌ನಲ್ಲಿ ಹಮ್ಮಿಕೊಳ್ಳಲಾಗಿರುವ ಮೂರು ದಿನಗಳ ಬೀಚ್ ಉತ್ಸವ ರವಿವಾರ ಸಮಾಪ್ತಿಗೊಂಡಿತು.
ಕೊನೆಯ ದಿನವಾದ ಇಂದು ಕೊಳ ಫ್ರೆಂಡ್ಸ್ ವತಿಯಿಂದ ಮಲ್ಪೆಬೀಚ್ ನಲ್ಲಿ ಶ್ವಾನ ಪ್ರದರ್ಶನ ಹಾಗೂ ಅರಿವು ಕಾರ್ಯಕ್ರಮವನ್ನು ಆಯೋಜಿಸ ಲಾಗಿತ್ತು. ವಿವಿಧ ಜಾತಿಯ ಶ್ವಾನಗಳು ಆಕರ್ಷಣೀಯವಾಗಿದ್ದವು. ಉಡುಪಿ ಶಾಸಕ ಕೆ.ರಘುಪತಿ ಭಟ್ ಪ್ರದರ್ಶನವನ್ನು ವೀಕ್ಷಿಸಿದರು.
ಅದೇ ರೀತಿ ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಮುಂಬೈಯಿಂದ ಮಲ್ಪೆ ಬೀಚ್‌ಗೆ ಬಂದಿರುವ ಯಾಚ್ ಇದರ ಉದ್ಘಾಟನೆಯನ್ನು ಶಾಸಕ ಕೆ. ರಘುಪತಿ ಭಟ್ ನೆರವೇರಿಸಿದರು. ಇದೇ ಸಂದರ್ಭದಲ್ಲಿ ಫ್ಲೋಬೋರ್ಡ್ ಸಾಹಸ ಪ್ರದರ್ಶನ ಅದ್ಭುತವಾಗಿತ್ತು. ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರು, ಸಾರ್ವ ಜನಿಕರು ಹಾಗೂ ಸ್ಥಳೀಯರು ಬೀಚ್ ಉತ್ಸವದಲ್ಲಿ ಭಾಗಿಯಾಗಿ ಸಂಭ್ರಮಿಸಿದರು.