ಖ್ಯಾತ ವಾಸ್ತುಶಿಲ್ಪಿ ಬಿ.ವಿ. ದೋಶಿ ನಿಧನ

Update: 2023-01-24 08:44 GMT

ಹೊಸದಿಲ್ಲಿ: ಖ್ಯಾತ ವಾಸ್ತುಶಿಲ್ಪಿ ಬಾಲಕೃಷ್ಣ ವಿಠಲದಾಸ್‌ ದೋಶಿ ಇಂದು ಅಹ್ಮದಾಬಾದ್‌ನಲ್ಲಿ ನಿಧನರಾದರು. ಅವರಿಗೆ 95 ವರ್ಷ ವಯಸ್ಸಾಗಿತ್ತು.

ಭಾರತದ ಕೆಲವೊಂದು ಖ್ಯಾತ ಕಟ್ಟಡಗಳಾದ ಬೆಂಗಳೂರು ಹಾಗೂ ಉದಯಪುರದಲ್ಲಿರುವ ಇಂಡಿಯನ್‌ ಇನ್ ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್ಮೆಂಟ್‌, ದಿಲ್ಲಿಯ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಫ್ಯಾಷನ್‌ ಟೆಕ್ನಾಲಜಿ, ಅಹ್ಮದಾಬಾದ್‌ನ ಅಮ್ದಾವಾದ್‌ ನಿ ಗುಫಾ ಅಂಡರ್‌ಗ್ರೌಂಡ್‌ ಗ್ಯಾಲರಿ, ಸೆಂಟರ್‌ ಫಾರ್‌ ಎನ್ವಿರಾನ್ಮೆಂಟಲ್‌ ಪ್ಲಾನಿಂಗ್‌ ಎಂಡ್‌ ಟೆಕ್ನಾಲಜಿ, ಠಾಗೋರ್‌ ಮೆಮೋರಿಯಲ್‌ ಹಾಲ್‌, ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಾಲಜಿ, ಪ್ರೇಮಾ ಭಾಯಿ ಹಾಲ್‌ ಮತ್ತು ಖಾಸಗಿ ನಿವಾಸ ಕಮಲಾ ಹೌಸ್‌ ಇವೆಲ್ಲವೂ ದೋಶಿ ಅವರ ವಿನ್ಯಾಸದ ಕೈಚಳಕದಲ್ಲಿ ಮೂಡಿ ಬಂದಿವೆ.

ಇಂದೋರ್‌ನ ಅರಣ್ಯ ಕಡಿಮೆ ವೆಚ್ಚದ ವಸತಿ ಯೋಜನೆಯ ವಿನ್ಯಾಸಕ್ಕೆ ಆಗಾ ಖಾನ್‌ ಆವಾರ್ಡ್‌ ಫಾರ್‌ ಆರ್ಕಿಕೆಕ್ಚರ್‌ ದೊರಕಿದೆ.

ಭಾರತದ ಅತ್ಯುನ್ನತ ಆರ್ಕಿಟೆಕ್ಟ್‌ ಎಂದು ಪರಿಗಣಿತರಾದ ದೋಶಿ ಅವರು ಈ ಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ 'ಪ್ರಿಟ್ಝ್ ಕೆರ್‌ ಪ್ರೈಝ್‌' ಅನ್ನು 2018 ರಲ್ಲಿ ಪಡೆದ ಮೊದಲ ಭಾರತೀಯರಾಗಿದ್ದರು.

ಇದನ್ನೂ ಓದಿ: ಬಿಬಿಸಿ ಸಾಕ್ಷ್ಯಚಿತ್ರ: ನಿರ್ಬಂಧ ಆದೇಶಕ್ಕೆ ಕಾರಣಗಳನ್ನು ಇನ್ನೂ ಬಹಿರಂಗಪಡಿಸದ ಕೇಂದ್ರ

Similar News